ಕೆಎಸ್‌ಟಿಎ ರಾಜ್ಯ ಸಮ್ಮೇಳನ ಉಪ್ಪಳದಲ್ಲಿ ಧ್ವಜ ದಿನಾಚರಣೆ
ಉಪ್ಪಳ: ಕೆಎಸ್‌ಟಿಎ ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ಧ್ವಜದಿನ ಆಚರಿಸಲಾಯಿತು. ಉಪ್ಪಳಪೇಟೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ರಾಘವನ್ ಉದ್ಘಾಟಿಸಿದರು. ಉಪಜಿಲ್ಲಾ ಉಪಾಧ್ಯಕ್ಷ ಜಿಜೇಶ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸಂತೋಷ್ ಕೆ.ವಿ. ಸ್ವಾಗತಿಸಿ, ಮೋಹನ ಬಿ, ರವೀಂದ್ರ ಎನ್, ವಿಜಯ ಸಿ.ಎಚ್, ಅಶ್ರಫ್, ಮಮತ ಇ.ಆರ್. ಮಾತನಾಡಿದರು. ಜಯಂತ ವಂದಿಸಿದರು.