ಕೆಎಸ್‌ಟಿ ಎಂಪ್ಲೋಯೀಸ್ ಸಂಘ್ ಜಿಲ್ಲಾ ಸಮಾವೇಶ
ಕಾಸರಗೋಡು: ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಕೆಎಸ್‌ಟಿ ಎಂಪ್ಲೋಯೀಸ್ ಸಂಘ್ (ಬಿಎಂಎಸ್) ಜಿಲ್ಲಾ ಸಮಾವೇಶ ಜರಗಿತು. ಜಿಲ್ಲಾಧ್ಯಕ್ಷ ಅನಿಲ್ ಬಿ. ನಾಯರ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್ ಉದ್ಘಾಟಿಸಿದರು. ಎಡರಂಗ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ಕೆಎಸ್‌ಆರ್‌ಟಿಸಿಯನ್ನು ನಾಶಪಡಿಸುವ ಕ್ರಮಗಳ ವಿರುದ್ಧ ಎಂಪ್ಲೋಯೀಸ್ ಸಂಘ್‌ನ ಹೋ ರಾಟ ಅನಿವಾರ್ಯವೆಂದು ಉದ್ಘಾಟನೆ ವೇಳೆ ಅವರು ನುಡಿದರು. ಕೆಎಸ್‌ಆರ್ ಟಿಸಿಯಲ್ಲಿ ಕೆಎಸ್‌ಟಿ ಎಂಪ್ಲೋಯೀಸ್ ಸಂಘ್ ಅತ್ಯಂತ ದೊಡ್ಡ ಅಂಗೀಕಾರವಿರುವ ಕಾರ್ಮಿಕರ ಸಂಘಟನೆಯಾಗಿ ಬೆಳೆಯಬೇಕಾಗಿರು ವುದು ಸಂಸ್ಥೆ ಹಾಗೂ ನೌಕರರಿಗೆ ಅತ್ಯಗತ್ಯವಾಗಿದೆ ಎಂದು ಅವರು ನುಡಿದರು. ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕೆ.ಕೆ.ಪುರಂ, ಬಿಎಂಎಸ್ ಜಿಲ್ಲಾಧ್ಯಕ್ಷ ಪಿ. ಉಪೇಂದ್ರನ್, ಎನ್‌ಜಿಒ ಸಂಘ್ ಜಿಲ್ಲಾಧ್ಯಕ್ಷ ಕೃಷ್ಣನ್ ಮಾಸ್ತರ್, ಕೇರಳ ಪೆನ್ಶನರ್ಸ್ ಸಂಘ್ ಜಿಲ್ಲಾ ಕಾರ್ಯದರ್ಶಿ ಕುಂಞಿರಾಮನ್ ಕೇಳೋತ್, ವಾಟರ್ ಅಥೋರಿಟಿ ಸಂಘ್‌ನ ರಾಜ್ಯ ಉಪಾಧ್ಯಕ್ಷ ಮಧುಸೂದನನ್, ಪಿಬಿಇಎಫ್ ಜಿಲ್ಲಾ ಅಧ್ಯಕ್ಷ ಗೋಪಾಲಕೃಷ್ಣನ್, ಡಿಆರ್‌ಕೆಎಸ್ ಜಿಲ್ಲಾ ಕಾರ್ಯದರ್ಶಿ ತುಳಸೀದಾಸ್ ಶುಭ ಕೋರಿದರು. ಕೆಎಸ್‌ಟಿ ಎಂಪ್ಲೋಯೀಸ್ ಸಂಘ್ ರಾಜ್ಯ ಕಾರ್ಯದರ್ಶಿ ಕೆ.ಪಿ. ವಿಜಯನ್ ಸಮಾರೋಪ ಭಾಷಣ ಮಾಡಿದರು. ಸಭೆಯಲ್ಲಿ ಜಿಲ್ಲಾ ವಲಯ ಪದಾಧಿಕಾರಿಗಳು ಭಾಗವಹಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ. ಪ್ರವೀಣ್ ವಂದಿಸಿದರು.