ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜಾತ್ರೆ ೬ರಿಂದ

ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕೋತ್ಸವ ಈ ತಿಂಗಳ ೬,೭ರಂದು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಪೌರೋಹಿತ್ಯದಲ್ಲಿ  ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ೬ರಂದು  ಬೆಳಿಗ್ಗೆ ೫ ಗಂಟೆಯಿಂದ ಮಹಾಗಣಪತಿ ಹೋಮ, ಮಹಾಪೂಜೆ, ೭.೩೦ರಿಂದ ಭಜಜೆ, ೯.೩೦ಕ್ಕೆ ತಂತ್ರಿಗಳ ಆಗಮನ, ಭಜನೆ, ೧೧ ಗಂಟೆಯಿಂದ ಪುಣ್ಯಾಹ, ನವಕ ಕಲಶಪೂಜೆ, ಅಭಿಷೇಕ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಯಿಂದ ಚೆಂಡೆಮೇಳ, ೬.೪೫ಕ್ಕೆ ದೀಪಾರಾಧನೆ, ೭ ಗಂಟೆಯಿಂದ ಶ್ರೀ ದೇವರ ಭೂತಬಲಿ, ಬಟ್ಟಲುಕಾಣಿಕೆ, ಮಂತ್ರಾ ಕ್ಷತೆ, ೭ರಂದು ಬುಧವಾರ ಶ್ರೀ ದೈವಗಳಿಗೆ ತಂಬಿಲ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page