ಕೆಲಸ ಮುಗಿಸಿ ತೆರಳುತ್ತಿದ್ದ ಬ್ಯಾಂಕ್ ನೌಕರೆಗೆ ಕಿರುಕುಳ: ಕ್ಯಾಟರಿಂಗ್ ಕಾರ್ಮಿಕ ಮಧ್ಯ ವಯಸ್ಕ ಸೆರೆ
ಕಣ್ಣೂರು: ಕೆಲಸ ಮುಗಿಸಿ ವಾಸ ಸ್ಥಳಕ್ಕೆ ತೆರಳುತ್ತಿದ್ದ ಬ್ಯಾಂಕ್ ನೌಕg ಯಾದ ಯುವತಿಯನ್ನು ಬಲವಂತ ವಾಗಿ ಹಿಡಿತ ಮಧ್ಯವಯಸ್ಕನನ್ನು ಪೊಲೀಸರು ಸೆರೆ ಹಿಡಿದರು. ಕೆಟರಿಂಗ್ ಕಾರ್ಮಿಕ ವಳಪಟ್ಟಣಂ ಫಾತಿಮ ಮಂಜಿಲ್ನ ಮುಹಮ್ಮದ್ ಇಸ್ಹಾಕ್ (56)ನನ್ನು ಟೌನ್ ಸ್ಟೇಷನ್ ಇನ್ಸ್ಪೆಕ್ಟರ್ ಶ್ರೀಜಿತ್ ಹಾಗೂ ತಂಡ ಬಂಧಿಸಿದೆ. ಬುಧವಾರ ರಾತ್ರಿ 7.30ರ ಸಮಯಕ್ಕೆ ತಾವಕ್ಕರ ಪುದಿಯ ಬಸ್ಸ್ಟಾಂಡ್ ಸಮೀಪದಲ್ಲಿ ಘಟನೆ ನಡೆದಿದೆ. ಮಾನಂತವಾಡಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ 24ರ ಹರೆಯದ ಯುವತಿಯನ್ನು ಆರೋಪಿ ಬಲವಂತವಾಗಿ ಹಿಡಿದಿದ್ದನು. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಗಂಟೆಗಳೊಳಗೆ ಆರೋಪಿಯನ್ನು ಕಸ್ಟಡಿಗೆ ತೆಗೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.