ಹೊಸಂಗಡಿ: ಸಿಪಿಎಂ ಮಾಜಿ ಜಿಲ್ಲಾ ಸಮಿತಿ ಸದಸ್ಯ, ಮಂಜೇಶ್ವರ ಏರಿಯಾ ಕಾರ್ಯದರ್ಶಿ ಎ. ಕುಂಞಿಕಣ್ಣನ್ ನಾಯರ್ ಸಂಸ್ಮರಣೆ ಹೊಸಂಗಡಿ ಎಕೆಜಿ ಮಂದಿರದಲ್ಲಿ ಜರಗಿತು. ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಕೆ. ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ಎಂ. ಸುಮತಿ, ಗೀತಾ ಸಾಮಾನಿ, ವಿ.ವಿ. ರಮೇಶನ್ ಮಾತನಾಡಿದರು.