ಕೆ. ಸುರೇಂದ್ರನ್ ನೇತೃತ್ವದ ಎನ್.ಡಿ.ಎ ಪಾದಯಾತ್ರೆ ೨೭ರಂದು ಕಾಸರಗೋಡಿನಿಂದ

ಕಾಸರಗೋಡು: ಎನ್.ಡಿ.ಎ ರಾಜ್ಯ ಚೆಯರ್‌ಮೆನ್ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯುವ ಕೇರಳ ಪಾದಯಾತ್ರೆ ಈ ತಿಂಗಳ ೨೭ರಂದು ಕಾಸರಗೋಡಿನಿಂದ ಆರಂಭಗೊಳ್ಳಲಿದೆ. ಅಂದು ಸಂಜೆ ೩ ಗಂಟೆಗೆ ಪಾದ ಯಾತ್ರೆಯನ್ನು ತಾಳಿಪಡ್ಪು ಮೈದಾನದಲ್ಲಿ   ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟಿಸುವರು. ಜಿಲ್ಲೆ, ರಾಜ್ಯ ನೇತಾರರ ಸಹಿತ ಹಲವರು ಭಾಗವಹಿ ಸಲಿದ್ದಾರೆ. ಅಂದು ಸಂಜೆ ಮೇಲ್ಪ ರಂಬದಲ್ಲಿ ಮೊದಲ ದಿನದ ಪಾದಯಾತ್ರೆ ಸಮಾಪ್ತಿಗೊಳ್ಳಲಿದೆ.

೨೭ರಂದು ಬೆಳಿಗ್ಗೆ ನೇತಾರರು ಮಧೂರು ಕ್ಷೇತ್ರ ದರ್ಶನ ನಡೆಸು ವುದ ರೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡು ವರು. ೧೦.೩೦ಕ್ಕೆ ಕುಂಬಳೆಯಲ್ಲಿ  ವಿವಿಧ ಕೇಂದ್ರ ಯೋಜನೆಗಳ ಫಲಾನುಭವಿಗಳ ಸಭೆ ನಡೆಯಲಿದೆ. ೧೨ ಗಂಟೆಗೆ ಕಾಸರಗೋಡಿನ ಜೀವಾಸ್ ಮಾನಸ ಆಡಿಟೋರಿಯಂ ನಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಧಾರ್ಮಿಕ, ಸಾಂಸ್ಕೃತಿಕ ನೇತಾರರ ಸಂಗಮ ನಡೆಯಲಿರುವುದು.

ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಈ ಪಾದಯಾತ್ರೆ ನಡೆಯಲಿದ್ದು, ಇದರ ಯಶಸ್ವಿಗೆ ಭರದ ಸಿದ್ಧತೆ ನಡೆದಿದೆ.  ರಾಜ್ಯದ  ೨೦ ಲೋಕಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ನಡೆಯಲಿದೆ. ನಾಡಿನ ವಿವಿಧ ಭಾಗಗಳಿಂದ ಭಾರೀ ಸಂಖ್ಯೆ ಯಲ್ಲಿ  ಜನರನ್ನು ಸೇರಿಸಿ ಕಾರ್ಯಕ್ರ ಮವನ್ನು ಯಶಸ್ವಿಗೊಳಿಸಲು ನಿರ್ಧರಿ ಸಲಾಗಿದೆ.  ಯಾತ್ರೆ ೨೯ರಂದು ಕಣ್ಣೂರಿಗೆ, ೩೦ರಂದು ವಯನಾಡ್ ಹಾಗೂ ೩೧ರಂದು ವಡಗರಕ್ಕೆ ತಲು ಪಲಿದೆ. ಫೆಬ್ರವರಿ ೭ರಂದು ಪಾಲಕ್ಕಾ ಡ್‌ನಲ್ಲಿ ಯಾತ್ರೆ ಸಮಾಪ್ತಿಗೊಳ್ಳಲಿದೆ. ಯಾತ್ರೆಯನ್ನು ಪ್ರತಿದಿನ ಕೇಂದ್ರ ಸಚಿವರು, ರಾಷ್ಟ್ರೀಯ ನೇತಾರರು  ಉದ್ಘಾಟಿ ಸುವರು.  ಹಲವೆಡೆ ನಡೆಯುವ ಪರ್ಯಟನೆಯನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಸಹಿತ ಹಲವರು ಪ್ರಮುಖ ನೇತಾರರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page