ಕೇಂದ್ರದಿಂದ ಉಚಿತವಾಗಿ ಲಭಿಸಲಿರುವ ಇ-ಬಸ್ ಪಡೆಯಲು ರಾಜ್ಯ ಸಾರಿಗೆ ಇಲಾಖೆ ಹಿಂಜರಿತ

ತಿರುವನಂತಪುರ: ರಾಜ್ಯಕ್ಕೆ ಹೊಸತಾಗಿ ಇಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಿರುವ ಎಲ್ಲಾ ಟೆಂಡರ್ ಗಳನ್ನು ಕೆಎಸ್‌ಆರ್‌ಟಿಸಿ ರದ್ದುಗೊ ಳಿಸಿದೆ. ಕೇಂದ್ರದಿಂದ ಉಚಿತವಾಗಿ ೯೫೦ ಇ-ಬಸ್‌ಗಳನ್ನು ಪಡೆಯ ಲಿರುವ ಕ್ರಮದಿಂದ ಹಿಂಜರಿಂiiಲಾ ಗಿದೆ. ಇಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವ  ಬಗ್ಗೆ ಇಲಾಖೆ ಸಚಿವ ಗಣೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆಂದು ಇದುವೇ ಈಗಿನ ನಿರ್ಧಾರಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಕೇರಳದ ನಗರಗಳಲ್ಲಿ ಸಂಚಾರ ನಡೆಸಲು ಪ್ರಧಾನಮಂತ್ರಿ ಇ-ಬಸ್ ಸೇವೆ ಯೋಜನೆ ಪ್ರಕಾರ ಕೇಂದ್ರ ಮಂಜೂರು ಮಾಡಿದ ೯೫೦ ಇ-ಬಸ್‌ಗಳನ್ನು ಪಡೆಯಲು  ಒಪ್ಪಿಗೆ ಸೂಚಿಸಿ ಸಾರಿಗೆ ಇಲಾಖೆ ಅಕ್ಟೋಬರ್ ೪ರಂದು ಪತ್ರ ಬರೆದಿತ್ತು. ಹಣಕಾಸು ಇಲಾಖೆ ಮುಂದಿನ ಕ್ರಮ ಕೈಗೊಂಡರೆ ಬಸ್‌ಗಳು  ಲಭಿಸಲಿದೆ. ಆದರೆ ನೂತನ ಸಚಿವರು ನಿರ್ಧಾರ ಕೈಗೊ ಳ್ಳುವವರೆಗೆ ಇ-ಬಸ್‌ಗಳ ಖರೀದಿ ಯಿಂದ ಕೆಎಸ್‌ಆರ್‌ಟಿಸಿ ಮೆನೇಜ್ ಮೆಂಟ್ ದೂರ  ಉಳಿದಿದೆ. 

Leave a Reply

Your email address will not be published. Required fields are marked *

You cannot copy content of this page