ಕೇಂದ್ರ ಸಚಿವ ನಿತಿನ್ ಗಡ್ಕರಿ ೧೨ರಂದು ಕಾಸರಗೋಡಿಗೆ
ಕಾಸರಗೋಡು: ಕೇಂದ್ರ ಭೂ ಸಾರಿಗೆ-ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಖಾತೆ ಸಚಿವ ನಿತಿನ್ ಗಡ್ಕರಿ ಈತಿಂಗಳ ೧೨ರಂದು ಕಾಸರಗೋಡಿಗೆ ಆಗಮಿಸು ವರು. ಅಂದು ಬೆಳಿಗ್ಗೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಕೇಂದ್ರ ಕೇರಳದಲ್ಲಿ ಜ್ಯಾರಿಗೊಳಿಸಲು ತೀರ್ಮಾ ನಿಸಿರುವ ಅಭಿವೃದ್ಧಿ ಯೋಜನೆಗಳನ್ನು ಸಚಿವರು ಘೋಷಿಸುವರು. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ಎರಡು ಬೃಹತ್ ಅಭಿವೃದ್ಧಿ ಯೋಜನೆ ಜ್ಯಾರಿಗೊ ಳಿಸಲು ಕೇಂದ್ರ ಸರಕಾರ ತೀರ್ಮಾ ನಿಸಿದ್ದು, ಅದರ ಘೋಷಣೆಯನ್ನು ಸಚಿವ ಗಡ್ಕರಿ ಇದೇ ಕಾರ್ಯಕ್ರಮದಲ್ಲಿ ನಡೆಸು ವರು. ಆದರೆ ಆ ಎರಡು ಅಭಿವೃದ್ಧಿ ಯೋಜನೆಗಳು ಯಾವುದೆಂಬುವುದನ್ನು ಈತನಕ ಬಹಿರಂಗಪಡಿಸಿಲ್ಲ. ಅಂದು ನಡೆಯುವ ಕಾರ್ಯಕ್ರಮದಲ್ಲೇ ಅದನ್ನು ಪ್ರಕಟಿಸಲಾಗುವುದು.
ಬಿಜೆಪಿಯ ಕೆಲವು ಕೇಂದ್ರ ಮತ್ತು ರಾಜ್ಯ ನೇತಾರರು ಈ ಕಾರ್ಯಕ್ರಮ ನಡೆಸುವರು. ಕಾಸರಗೋಡಿನಲ್ಲಿ ನಡೆಯುವ ಈ ಕಾರ್ಯಕ್ರಮದ ಬಳಿಕ ಕೇಂದ್ರ ಸಚಿವರು ಮೂನಾರ್‌ನಲ್ಲಿ ನಡೆಯುವ ಇದೇ ರೀತಿಯ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲೂ ಹಲವು ಅಭಿವೃದ್ಧಿ ಯೋಜನೆಗಳ ಘೋಷಣೆಯನ್ನು ಅವರು ನಡೆಸುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಗೆ ತಿಂಗಳುಗಳು ಮಾತ್ರವೇ ಬಾಕಿಯಿದ್ದು, ಅದರ ಮೊದಲು ಕೇರಳ ಮಾತ್ರವಲ್ಲ ದೇಶದ ಇತರ ಹಲವು ರಾಜ್ಯಗಳಲ್ಲೂ ಕೇಂದ್ರ ಸರಕಾರ ಹಲವು ಅಭಿವೃದ್ಧಿ ಯೋಜನೆಗಳನ್ನು ಜ್ಯಾರಿಗೊಳಿಸಲು ತೀರ್ಮಾನಿಸಿದ್ದು, ಅದರಂತ ಕಾಸರಗೋಡೂ ಸೇರಿದಂತೆ ಕೇರಳದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜ್ಯಾರಿಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.