ಕೇಂದ್ರ ಸರಕಾರದ ವಿರುದ್ಧ ದಿಲ್ಲಿಯಲ್ಲಿ ಸಿ.ಎಂ. ನೇತೃತ್ವದಲ್ಲಿ ಪ್ರತಿಭಟನೆ

ನವದೆಹಲಿ: ಕೇಂದ್ರ ನಿಧಿ ಹಂಚಿಕೆ ಯಲ್ಲಿ ಕೇಂದ್ರ ಸರಕಾರ ಕೇರಳದೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಹಾಗೂ ಕೇಂದ್ರದ ಹಣಕಾಸು ನೀತಿಗಳು ಕೇರಳವನ್ನು ಆರ್ಥಿಕವಾಗಿ ಕುಗ್ಗಿಸುತ್ತಿವೆ ಎಂದು ಆರೋಪಿಸಿ ಮತ್ತು ಅಂತಹ ನೀತಿಗಳನ್ನು ಪ್ರತಿಭಟಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನವದೆಹಲಿಯಲ್ಲಿ ಜಂತರ್-ಮಂತರ್ ನಲ್ಲಿ ಪ್ರತಿಭಟನಾ ಆಂದೋಲನ ಆರಂಭಿಸಲಾಗಿದೆ. ಇಂದು ಬೆಳಿಗ್ಗೆ ಆರಂಭಗೊಂಡ ಈ ಪ್ರತಿಭಟನೆಯಲ್ಲಿ ಕೇರಳ ಸಚಿವ ಸಂಪುಟದ ಸಹೋದ್ಯೋ ಗಿಗಳು, ಎಡರಂಗದ ಸಂಸದರು ಮತ್ತು ಶಾಸಕರು ಭಾಗವಹಿಸುತ್ತಿದ್ದಾರೆ. ಇದರಲ್ಲಿ ಡಿಎಂಕೆ, ಆರ್‌ಜೆಡಿ ನ್ಯಾಷನಲ್ ಕಾನ್ಫರೆನ್ಸ್, ಜೆ.ಎಂ.ಎಂ, ಎನ್‌ಸಿಪಿ, ಅಮ್ ಆದ್ಮಿ ಪಾರ್ಟಿ ಇತ್ಯಾದಿ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ನೇತಾರರೂ ಭಾಗವಹಿಸಿ, ಕೇರಳಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಪ್ರಸ್ತುತ ಹಣಕಾಸು ವರ್ಷದಲ್ಲಿ ಕೇರಳದ ಆದಾಯದಲ್ಲಿ ಕೇಂದ್ರ ಸರಕಾರ ೫೭,೪೦೦ ಕೋಟಿ ರೂ.ಗಳನ್ನು ಕಡಿತ ಗೊಳಿಸಿದೆ. ಕೇಂದ್ರವು ಸಂಗ್ರಹಿಸುತ್ತಿರುವ ತೆರಿಗೆಯಿಂದ ತನ್ನ ಪಾಲನ್ನು ಕೊಡುತ್ತಿಲ ವೆಂದು ಕೇರಳ ಸರಕಾರ ದೂರಿದೆ.

೨೦೨೧-೨೩ರ ಅಂಕಿ ಅಂಶಗಳ ಪ್ರಕಾರ, ರಾಷ್ಟ್ರೀಯ ಸರಾಸರಿಯಲ್ಲಿ ರಾಜ್ಯಗಳು ಸಂಗ್ರಹಿಸುವ ಪ್ರತೀ ೬೫ ರೂ.ಗೆ ಕೇಂದ್ರವು ೩೫ ರೂ.ಗಳನ್ನು ನೀಡಬೇಕೆಂದು ಕೇರಳ ಸರಕಾರವು ರಾಜ್ಯ ಹಣಕಾಸು ಕುರಿತು ಆರ್.ಬಿ.ಐ. ವರದಿಯನ್ನು ಉಲ್ಲೇಖಿಸಿ ಹೇಳಿದೆ. ಆದರೆ ಕೇರಳದ ಸ್ವಂತ ತೆರಿಗೆ ಸಂಗ್ರಹದ ಪ್ರತೀ ೭೯ ರೂ.ಗಳ ಪೈಕಿ ಕೇಂದ್ರವು ಕೇವಲ ೨೧ ರೂ.ಗಳನ್ನು ಮಾತ್ರವೇ ನೀಡುತ್ತಿದೆ. ಅಂದರೆ, ೧೦೦ರೂ.ನಲ್ಲಿ ಕೇವಲ ೨೧ ರೂ. ಮಾತ್ರ ಕೇಂದ್ರದ ಕೊಡುಗೆಯಾಗಿದೆ. ಆದರೆ ಉತ್ತರ ಪ್ರದೇಶಕ್ಕೆ ೧೦೦ ರೂ.ಗಳಲ್ಲಿ ತಲಾ ೪೬ ರೂ. ಮತ್ತು ಬಿಹಾರಕ್ಕೆ  ೧೦೦ ರೂ.ಗೆ ೭೦ ರೂ.ನಂತೆ ನೀಡಲಾಗುತ್ತಿದೆ ಎಂದೂ ಆ ಮೂಲಕ ಕೇಂದ್ರ ನಮ್ಮೊಂದಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದೂ ಕೇರಳ ಸರಕಾರ ಆರೋಪಿಸಿದೆ.

ದಿಲ್ಲಿಯಲ್ಲಿ  ಇಂದು ಬೆಳಿಗ್ಗೆ ಆರಂಭ ಗೊಂಡ ಆಂದೋಲನದಲ್ಲಿ ಭಾಗವಹಿ ಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿಪಕ್ಷ ಯುಡಿಎಫ್‌ನೊಂದಿಗೂ ಕೇಳಿಕೊಂಡಿದ್ದರು. ಆದರೆ ಕೇರಳ ಸರಕಾರದ ನೇತೃತ್ವದಲ್ಲಿ ನಡೆಯುವ ಯಾವುದೇ ಚಳವಳಿಯಲ್ಲಿ ಭಾಗವಹಿಸದೆ ಇರುವ ತೀರ್ಮಾನ ಯುಡಿಎಫ್ ಕೈಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page