ಕೇರಳ ನಾಳೆ ಮತಗಟ್ಟೆಗೆ

ಕಾಸರಗೋಡು: ಒಂದೂವರೆ ತಿಂಗಳ ತನಕ ಮುಂದುವರಿದ ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ನಿನ್ನೆ ಸಂಜೆ 6 ಗಂಟೆಗೆ ಅದ್ದೂರಿಯ ತೆರೆಬಿದ್ದಿದೆ. ಮತದಾರರು ನಾಳೆ ಮತಗಟ್ಟೆಗೆ ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಉಮೇದ್ವಾರರ ಸೋಲು ಗೆಲುವಿನ ಭವಿಷ್ಯ ನಿರ್ಣಯಿಸಲಿದ್ದಾರೆ. ಮತದಾನಕ್ಕೆ ಅಗತ್ಯವಿರುವ ಸಾಮಗ್ರಿಗಳ ವಿತರಣೆ ಇಂದು ಬೆಳಿಗ್ಗಿನಿಂದ ಆರಂಭಗೊAಡಿದೆ. ರಾಜ್ಯದಲ್ಲಿ ಒಟ್ಟು 2,77,49,159 ಮತದಾರರಿದ್ದಾರೆ.
ರಾಜ್ಯದಲ್ಲಿ ನಾಳೆ ಬೆಳಿಗ್ಗೆ 7 ಗಂಟೆಯಿAದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. ರಾಜ್ಯದ ಒಟ್ಟು 20 ಲೋಕಸಭಾ ಕ್ಷೇತ್ರಗಳ ಲ್ಲಾಗಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರರೂ ಸೇರಿದಂತೆ ಒಟ್ಟು 194 ಉಮೇದ್ವಾರರು ಈ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ರಾಜಕೀಯ ಗೆಲುವಿನ ಅದೃಷ್ಟ ಪರೀಕ್ಷಿಸಲಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 9 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಮಾತ್ರವಲ್ಲ ಈ ಕ್ಷೇತ್ರದಲ್ಲಿ 7,01,475 ಪುರುಷರು ಮತ್ತು 7,50,7461 ಮಹಿಳೆಯರು ಮತ್ತು 14 ಮಂಗಳಮುಖಿಯರು ಸೇರಿ ಒಟ್ಟು 14,52,230 ಮತದಾರರಿದ್ದಾರೆ. ಇದರಲ್ಲಿ 85ಕ್ಕಿಂತ ಹೆಚ್ಚು ಪ್ರಾಯದ 5331 ಮಂದಿ, 3566 ಮಂದಿ ವಿಕಲ ಚೇತನರು ಈಗಾಗಲೇ ಅವರ ಮನೆಗಳಲ್ಲೇ ಮತ ಚಲಾಯಿಸಿದ್ದಾರೆ. ಇದರ ಹೊರತಾಗಿ ಅಗತ್ಯ ಸೇವಾ ಮತದಾರರು 642 ಮತ ಚಲಾಯಿಸಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಮಂಜೇಶ್ವರ 205, ಕಾಸರಗೋಡು 198, ಉದುಮ 198, ಹೊಸದುರ್ಗ 196, ತೃಕರಿಪುರ 194, ಪಯ್ಯನ್ನೂರು 187 ಮತ್ತು ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರಗಳಲ್ಲಿ 170 ಸೇರಿದಂತೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1334 ಮತಗಟ್ಟೆಗಳಲ್ಲಾಗಿ ನಾಳೆ ಮತದಾನ ನಡೆಯಲಿದೆ. ಇದಕ್ಕಿರುವ ಎಲ್ಲಾ ಸಜ್ಜೀಕರಣಗಳು ಈಗಾಗಲೇ ಪೂರ್ಣಗೊಂಡಿದೆ. ಚುನಾವಣಾ ಸೇವಾ ಕರ್ತವ್ಯಕ್ಕಾಗಿ ನೇಮಿಸಲಾಗಿ ರುವ ಎಲ್ಲಾ ಸಿಬ್ಬಂದಿಗಳು ಇಂದು ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗೆ ತೆರಳಲಿದ್ದಾರೆ. ರಾಜ್ಯದಲ್ಲಿ ಎಡರಂಗ, ಯುಡಿಎಫ್ ಮತ್ತು ಎಡರಂಗದ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಇದರಲ್ಲಿ 15 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಎಲ್ಲಾ ರಾಜಕೀಯ ಪಕ್ಷಗಳು ಭಾರೀ ಗೆಲುವಿನ ನಿರೀಕ್ಷೆ ವ್ಯಕ್ತಪಡಿಸಿವೆ.
ಕೇರಳದ 20 ಕ್ಷೇತ್ರಗಳ ಹೊರತಾಗಿ ಕರ್ನಾಟಕದ 14, ರಾಜಸ್ಥಾನದ 13 ಕ್ಷೇತ್ರಗಳೂ ಸೇರಿದಂತೆ ದ್ವಿತೀಯ ಹಂತದಲ್ಲಿ ನಾಳೆ 13 ರಾಜ್ಯಗಳ ಒಟ್ಟು 89 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ.ಮತದಾನದ ಹಿನ್ನೆಲೆಯಲ್ಲಿ ಎಲ್ಲೆಡೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮಾತ್ರವಲ್ಲ ಕೇಂದ್ರ ಪಡೆ ಮತ್ತು ಹೊರ ರಾಜ್ಯಗಳ ಪೊಲೀಸರನ್ನು ಕರ್ತವ್ಯಕ್ಕಾಗಿ ಕೇರಳಕ್ಕೆ ಕರೆಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page