ಕೇರಳ ಬ್ಯಾಂಕ್‌ನ ಕೊಡುಗೆ: ನಿಧನ ಹೊಂದಿದ ವಿಶ್ವನಾಥ ಗಟ್ಟಿಯವರ ಕುಟುಂಬಕ್ಕೆ ಮನೆ ಹಸ್ತಾಂತರ ನಾಳೆ

ಕುಂಬಳೆ: ಕೇರಳ ಬ್ಯಾಂಕ್ ಕುಂಬಳೆ ಬ್ರಾಂಚ್‌ನ ದೈನಂದಿನ ಠೇವಣಿ ಸಂಗ್ರಹಗಾರರಾಗಿದ್ದ ವೇಳೆ ಮೃತಪಟ್ಟ ಕುಂಡಾಪು ವಿಶ್ವನಾಥ ಗಟ್ಟಿಯವರ ಕುಟುಂಬಕ್ಕೆ ಚೌಕಿ ಕಲ್ಲಂಗೈಯಲ್ಲಿ ಬ್ಯಾಂಕ್ ನಿರ್ಮಿಸಿದ ಮನೆಯ ಕೀಲಿ ಕೈ ಹಸ್ತಾಂತರ, ಕುಟುಂಬ ಸಹಾಯಧನ ಹಸ್ತಾಂತರ ನಾಳೆ ನಡೆಯಲಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ.

ಜಿಲ್ಲೆಯ ಬ್ಯಾಂಕ್‌ನ ನೌಕರರೆಲ್ಲ ಸೇರಿ ಸಂಗ್ರಹಿಸಿದ ಮೊತ್ತದಿಂದ ೧೧ ಲಕ್ಷ ರೂ. ವೆಚ್ಚದಲ್ಲಿ ಸ್ನೇಹಮನೆ ನಿರ್ಮಿಸಲಾಗಿದೆ. ಕೇರಳ ಬ್ಯಾಂಕ್‌ನ ನೌಕರರು ಮೊದಲ ಬಾರಿ ಕಾರುಣ್ಯ ಚಟುವಟಿಕೆಯಲ್ಲಿ ಮನೆ ನಿರ್ಮಿಸಿ ನೀಡಿದ್ದಾರೆ. ನಾಳೆ ಬೆಳಿಗ್ಗೆ ೯ಕ್ಕೆ ಈ ಮನೆಯ ಕೀಲಿಕೈಯನ್ನು ಕೇರಳ ಬ್ಯಾಂಕ್ ಅಧ್ಯಕ್ಷ ಗೋಪಿ ಕೋಟ್ಟಮುರಿಕ್ಕಲ್ ಹಸ್ತಾಂತರಿಸುವರು. ಬ್ಯಾಂಕ್ ನಿರ್ದೇಶಕ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸುವರು. ವತ್ಸಲ ಕುಮಾರಿ, ಕೆ.ಸಿ. ಸಹದೇವನ್, ಜನರಲ್ ಮೆನೇಜರ್ ಅಬ್ದುಲ್ ಮುಜೀಬ್, ಡೆಪ್ಯುಟಿ ಜನರಲ್ ಮೆನೇಜರ್ ರಹನ ಸಿ.ವಿ. ಮಾತನಾ ಡುವರು. ಈ ಬಗ್ಗೆ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ರಹನ, ಪ್ರಕಾಶ್ ರಾವ್, ರಾಜನ್ ಟಿ, ಉಣ್ಣಿಕೃಷ್ಣನ್ ಎ, ಕೆ.ವಿ. ಬಾಲಗೋಪಾಲನ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page