ಕೇರಳ ವಿಜ್ಞಾನ ಕಾಂಗ್ರೆಸ್ ನಾಳೆಯಿಂದ

ಕಾಸರಗೋಡು: ಕೇರಳ ವಿಜ್ಞಾನ ಕಾಂಗ್ರೆಸ್ ನಾಳೆ ಬೆಳಿಗ್ಗೆ ೧೧ ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಆರಂಭಗೊಳ್ಳಲಿದೆ. ಇದು ಫೆ. ೧೧ರ ತನಕ ಮುಂದುವರಿಯಲಿದೆ. ನಾಳೆ ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು.  ವಿಜ್ಞಾನ ಕಾಂಗ್ರೆಸ್‌ನ್ನು ೯ರಂದು ಬೆಳಿಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಮಾತ್ರವಲ್ಲ ಐಸಿಸಿಎಸ್ ತಯಾರಿಸಿದ ಕ್ಲೈಮೆಟ್ ಸ್ಟೇಟ್‌ಮೆಂಟ್-೨೦೨೩ನ್ನು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಪ್ರಕಾಶನಗೈಯ್ಯುವರು.

ಅತ್ಯುತ್ತಮ ಯುವ ವಿಜ್ಞಾನಿಗಳಿಗಿರುವ ಪುರಸ್ಕಾರ ಮತ್ತು ವಿಜ್ಞಾನ ಸಾಹಿತ್ಯ ಪುರಸ್ಕಾರಗಳ ವಿತರಣೆಯನ್ನು ಮುಖ್ಯಮಂತ್ರಿ ನಡೆಸುವರು. ಮುಖ್ಯಮಂತ್ರಿಯವರ ಗೋಲ್ಡ್ ಮೆಡಲ್, ೫೦,೦೦೦ ರೂ.ಗಳ ನಗದು ಪುರಸ್ಕಾರ ಮತ್ತು ೫೦ ಲಕ್ಷ ರೂ.ಗಳ ರಿಸರ್ಚ್ ಪ್ರೊಜೆಕ್ಟ್‌ನ್ನು ವಿತರಿಸಲಾಗುವುದು. ಕಾಸರಗೋಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಪ್ರಧಾನ ಭಾಷಣ ಗಾರರಾಗಿರುವರು. ೨೦೨೨ನೇ ವರ್ಷದಲ್ಲಿ ರಾಸಾಯನಿಕ ವಿಜ್ಞಾನದ ನೋಬೆಲ್ ಪುರಸ್ಕಾರ ವಿಜೇತರಾದ  ಪ್ರೊ. ಮಾರ್ಟಿನ್ ಪಿ ಮೆಡಲ್ ಅವರು ಪ್ರಧಾನ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು.  ಈ ನಾಲ್ಕು ದಿನಗಳ ವಿಜ್ಞಾನ ಕಾರ್ಯಕ್ರಮದಲ್ಲಿ ಹಲವು  ಸಂಶೋಧನೆಗಳು, ಯುವಸಂಶೋಧನಾ ವಿದ್ಯಾರ್ಥಿಗಳು, ವಿವಿಧ ವಿಜ್ಞಾನ ಕ್ಷೇತ್ರಗಳ ವಿಜ್ಞಾನಿಗಳು ಸೇರಿದಂತೆ ಹಲವರು ಭಾಗವಹಿಸುವರು. ೧೨ ವಿಷಯಗಳ ಬಗ್ಗೆ ಆಯ್ದ ಪ್ರಬಂಧಗಳು ಮತ್ತು  ಪೋಸ್ಟರ್‌ಗಳನ್ನು ಮಂಡಿಸಲಾಗುವುದು. ವಿಜ್ಞಾನ ಮೇಳದಂಗವಾಗಿ  ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ದೇಶದ ವಿವಿಧ ಸಂಶೋಧನಾ ಕೇಂದ್ರಗಳ ಸ್ಟಾಲ್‌ಗಳು ಮತ್ತು ಪ್ರದರ್ಶನವನ್ನು  ಏರ್ಪಡಿಸಲಾಗುವುದು. ಜಿಲ್ಲೆಯ ಸ್ಥಳೀಯ ಸಮಸ್ಯೆಗಳಿಗೆ ಅತ್ಯುತ್ತಮ ರೀತಿಯಲ್ಲಿ  ವೈಜ್ಞಾನಿಕ ರೀತಿಯ ಪರಿಹಾರ ಮಾರ್ಗಗಳನ್ನು ಸೂಚಿಸುವ ಯುವಕರಿಗೆ  ಈ ಕಾರ್ಯಕ್ರಮದಲ್ಲಿ ಪುರಸ್ಕಾರ ವಿತರಿಸಲಾಗುವುದು.  ಕೇರಳ ವಿಜ್ಞಾನ-ತಂತ್ರಜ್ಞಾನ-ನೈಸರ್ಗಿಕ, ಕೌನ್ಸಿಲ್, ಜಲಸಂಪ ನ್ಮೂಲ ಅಭಿವೃದ್ಧಿ ವಿನಿಯೋಗ ಕೇಂದ್ರ ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಈ ವಿಜ್ಞಾನ ಮೇಳ ನಡೆಸಲಾಗುತ್ತದೆ.

ರಾಘವೇಶ್ವರ ಶ್ರೀಗಳಿಂದ ಆಶೀರ್ವಾದ ಪಡೆದ ಕಜಮಲೆ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು

ಬದಿಯಡ್ಕ: ಶ್ರೀ ರಾಮಚಂದ್ರಾ ಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಗೆ ಕಜಮಲೆ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನೀಡಿ ಆಶೀರ್ವಾದ ಪಡೆದುಕೊಳ್ಳಲಾಯಿತು. ಮುಳ್ಳೇರಿಯ ಹವ್ಯಕ ಮಂಡಲದ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು ಅವರ ಮನೆಯಲ್ಲಿ ನಡೆದ ಗುರುಭಿಕ್ಷಾ ಸೇವೆಯ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ  ಡಾ| ವೇಣುಗೋಪಾಲ ಕಳೆಯತ್ತೋಡಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಭಟ್ ಚೋಕೆಮೂಲೆ, ವೈದಿಕ ಸಮಿತಿಯ ಅಧ್ಯಕ್ಷ ಉಪ್ಪಂಗಳ ವೆಂಕಟ್ರಮಣ ಭಟ್, ಮುಳ್ಳೇರಿಯ ಹವ್ಯಕ ಮಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ ಸ್ವಾಮೀಜಿಯವರನ್ನು ಭೇಟಿಯಾದರು.

Leave a Reply

Your email address will not be published. Required fields are marked *

You cannot copy content of this page