‘ಕೇರಳ ವಿಜ್ಞಾನ ಕಾಂಗ್ರೆಸ್’ಗೆ ಚಾಲನೆ: ನಾಳೆ ಮುಖ್ಯಮಂತ್ರಿಯಿಂದ ಉದ್ಘಾಟನೆ

ಕಾಸರಗೋಡು: ಯುವ ಸಂಶೋಧಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಪರಸ್ಪರ ಸಂವಾದ ನಡೆಸಿ ಅದರಿಂದಇನ್ನಷ್ಟು ಹೆಚ್ಚಿನ  ಜ್ಞಾನಾರ್ಜನೆ ಪಡೆಯುವ ಅತೀ ಮಹತ್ತರವಾದ ಉದ್ದೇಶದಿಂದ ನಡೆಸಲಾಗುವ ‘ಕೇರಳ ವಿಜ್ಞಾನ ಕಾಂಗ್ರೆಸ್’ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ಇದು ಫೆ.೧೧ರ ತನಕ ಮುಂದುವರಿಯಲಿದೆ.

ಇದರ ಔದ್ಯೋಗಿಕ ಉದ್ಘಾಟನೆಯನ್ನು ನಾಳೆ ಬೆಳಿಗ್ಗೆ ೧೦ ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೆರವೇರಿಸುವರು. ಇಂದಿನಿಂದ ಮುಂದಿನ ನಾಲ್ಕು ದಿನಗಳ ತನಕ  ಮುಂದುವರಿಯುವ ವಿಜ್ಞಾನ ಅರಿವು ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತವಾಗಿ ೪೨೪ ಯುವ ವಿಜ್ಞಾನಿಗಳು ಭಾಗವಹಿಸುತ್ತಿದ್ದಾರೆ. ಒಟ್ಟು ೩೬೨ ಸಂಶೋಧನಾ ಪ್ರಬಂಧಗಳನ್ನು ಈ ಕಾರ್ಯಕ್ರಮದಲ್ಲಿ ಮಂಡಿಸಲಾಗುವುದು. ರಾಸಾಯನಿಕ ಶಾಸ್ತ್ರದಲ್ಲಿ ೨೦೨೨ನೇ ಸಾಲಿನ ನೋಬಲ್ ಪ್ರಶಸ್ತಿ ವಿಜೇತರಾದ ಪ್ರೊಫೆಸರ್ ಮೋರ್ಟನ್ ಮೆಲ್ಡನ್ ಈ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಗಾರರಾಗಿ ಭಾಗವಹಿಸುವರು. ಅವರು ವಿದ್ಯಾರ್ಥಿಗಳು ಮತ್ತು ಯುವ ವಿಜ್ಞಾನಿಗಳೊಂದಿಗೂ ಸಂವಾದ ನಡೆಸುವರು. ಕೇರಳ ವಿಜ್ಞಾನ- ತಂತ್ರಜ್ಞಾನ- ನೈಸರ್ಗಿಕ ಕೌನ್ಸಿಲ್, ಜಲ ಸಂಪನ್ಮೂಲ ಅಭಿವೃದ್ಧಿ ವಿನಿಯೋಗ ಕೇಂದ್ರ, ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಸಂಯುಕ್ತ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page