ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಮುದೆ, ನಾರಂಪಾಡಿ ಘಟಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
ಪೆರ್ಮುದೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಮುದೆ ಘಟಕದ ಮಹಾಸಭೆ ಪೆರ್ಮುದೆ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಎ.ವೈ. ಅಬ್ಬಾಸ್ ಅಧ್ಯಕ್ಷತೆ ವಹಿಸಿದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶೆರೀಫ್ ಉದ್ಘಾಟಿಸಿ ಮಾತನಾಡಿದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕೆ.ಜೆ. ಸಜಿ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಯಪಡಿಸಿದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಎ.ವೈ. ಅಬ್ಬಾಸ್, ಉಪಾಧ್ಯಕ್ಷರಾಗಿ ವಿಠಲ, ವಿಜಯ ಕುಮಾರ್, ಕಾರ್ಯದರ್ಶಿಯಾಗಿ ಜಯಪ್ರಕಾಶ ಕೆ, ಜೊತೆ ಕಾರ್ಯದರ್ಶಿಗಳಾಗಿ ಪ್ರವೀಣ್ ಕ್ರಾಸ್ತ, ಬಿ.ಎ. ಲತೀಫ್, ಖಜಾಂಚಿಯಾಗಿ ಅಬ್ಬಾಸ್ ಸುಪಾರಿ, 7 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು. ನಂತರ ಕೆ.ಜೆ. ಸಜಿ ಸತ್ಯಪ್ರತಿಜ್ಞೆ ಹೇಳಿಕೊಟ್ಟರು. ಪೆರ್ಮುದೆ ಪೇಟೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ, ಬಸ್ ತಂಗುದಾಣ ಇಲ್ಲದೆ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಅತೀವ ತೊಂದರೆಯನ್ನು ಅನುಭವಿಸುತ್ತಾರೆ. ಅಲ್ಲದೆ ಅಂಗಡಿಯ ಮುಂದೆ ಅಸಮರ್ಪಕವಾಗಿ ಅಗೆದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಇದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇ ಕೆಂದು ಒತ್ತಾಯಿಸಲಾಯಿತು.
ನಾರಂಪಾಡಿ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನಾರಂಪಾಡಿ ಯೂನಿಟ್ ಮಹಾಸಭೆ ಮಾರ್ಪನಡ್ಕ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ದಿವಾಕರ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾಧ್ಯಕ್ಷ ಅಹಮ್ಮದ್ ಶರೀಫ್ ಉದ್ಘಾಟಿಸಿದರು.
೨೦೨೪-೨೫ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಶ್ರೀಧರ್ ಪದ್ಮಾರ್, ಪ್ರಧಾನ ಕಾರ್ಯದರ್ಶಿ ಯಾಗಿ ಸಿದ್ದಿಕ್ ಮಾರ್ಪನಡ್ಕ, ಕೋಶಾ ಧಿಕಾರಿಯಾಗಿ ಬೆರ್ನಾರ್ಡ್ ಕ್ರಾಸ್ತಾ ನಾರಂಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಹಾಬಲೇಶ್ವರ ಭಟ್ ದಿಡ್ಪೆ ರಮೇಶ್ ಕೃಷ್ಣ ಪದ್ಮಾರ್, ಗೋಪಾಲಕೃಷ್ಣ ಸಿ.ಎಚ್, ಮೊಹಮ್ಮದ್ ಕೆ ಯು ಮಾರ್ಪನಡ್ಕ, ಬಶೀರ್ ಪಾರತ್ತೋಡು, ಮೋಹನ್ ಪ್ರಸಾದ್ ಏತಡ್ಕ, ದಿವಾಕರ ಮಾವಿನಕಟ್ಟೆ, ಜೋನಿ ಕ್ರಾಸ್ತಾ ಎ.ಪಿ. ಸರ್ಕಲ್, ಇಬ್ರಾಹಿಂ ಗೋಸಾಡರನ್ನು ಆರಿಸಲಾಯಿತು.
ಹಿರಿಯ ವ್ಯಾಪಾರಿ ಚಂದ್ರ ಶೇಖರ ಮಾವಿನಕಟ್ಟೆಯವರನ್ನು ಗೌರವಿಸಲಾಯಿತು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ವಲಯಾಧ್ಯಕ್ಷ ಗಣೇಶ್ ವತ್ಸ, ಬದಿಯಡ್ಕ ಯೂನಿಟ್ ಅಧ್ಯಕ್ಷ ಕುಂಜಾರು ಮೊಹಮ್ಮದ್ ಉಪಸ್ಥಿತರಿದ್ದರು.