ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಮತ್ತೆ ಅಬ್ಬರಿಸತೊಡಗಿದ ಮಳೆ
ತಿರುವನಂತಪುರ: ದಕ್ಷಿಣ ಭಾರತದ ಕರಾವಳಿ ರಾಜ್ಯಗಳಾದ ಕೇರಳ, ಪುದುಚ್ಚೇರಿ, ಕರ್ನಾಟಕ ಮತ್ತು ಕರ್ನಾಟಕದ ಹಲವೆಡೆಗಳಲ್ಲಿ ಭಾರೀ ಮಳೆ ಸುರಿಯತೊಡಗಿದ್ದು, ಇದು ನವಂಬರ್ ೨೯ರ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಈ ಅವಧಿಯಲ್ಲಿ ಭಾರೀ ಮಳೆ ಸುರಿದು ಜಲಪ್ರಳಯ ಸೃಷ್ಟಿಗೂ ದಾರಿಮಾಡಿಕೊಡಲಿದೆಯೆಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆದ್ದರಿಂದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಪುದುಚ್ಚೇರಿ ರಾಜ್ಯಗಳಲ್ಲಿ ಕಟ್ಟೆಚ್ಚರ ಸೂಚನೆ ನೀಡಲಾಗಿದೆ. ಪುದುಚ್ಚೇರಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದರ ಹೊರತಾಗಿ ಆಂಧ್ರಪ್ರದೇಶ ದಲ್ಲೂ ಮಳೆಯಾಗುತ್ತಿದೆ.
ಕೇರಳದ ಪತ್ತನಂತಿಟ್ಟ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಕ್ರಮವಾಗಿ ೭ ಸೆಂಟಿಮೀಟರ್ ಮತ್ತು ೫ ಸೆಂಟಿಮೀಟರ್ ಮಳೆಯಾಗಿದ್ದು, ಅದು ಇನ್ನೂ ತೀವ್ರಗೊಳ್ಳತೊಡಗಿದೆ. ಹಲವು ತಗ್ಗು ಪ್ರದೇಶಗಳು ನೀರಿನಿಂದಾವೃತ ಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಪತ್ತನಂತಿಟ್ಟ ಮತ್ತು ಕೋಟ್ಟಯಂ ಜಿಲ್ಲೆಗಳಲ್ಲಿ ಮಳೆ ಇನ್ನಷ್ಟು ಬಿರುಸುಕೊಂಡಿದ್ದು, ಇಲ್ಲಿ ಪ್ರಳಯ ಸದೃಶ ಸ್ಥಿತಿ ತಲೆದೋರಿದೆ. ಮಳೆ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಕೋಟ್ಟಯಂನ ಪಾಲಾ ಭರಣಂ ಜಾನಕಿ ಒಂಭತ್ತನೇ ತರಗತಿ ವಿದ್ಯಾರ್ಥಿನಿ, ಸಿಬಿ ಎಂಬವರ ಪುತ್ರಿ ಮರಿಯಾ (೧೪) ಮತ್ತು ಪತ್ತನಂತಿಟ್ಟ ನಾರಂಙದ ಸುಧರ್ಮ (೭೧) ಹರೆಯದ ಮಹಿಳೆ ತೋಡಿನ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದವರು. ಮಾತ್ರವಲ್ಲ ಪತ್ತನಂತಿಟ್ಟ ಜಿಲ್ಲೆಯ ಕೊಟ್ಟಾತಟ್ಟ ಮೂಲೆ, ನಗರತೋಡು, ಚೆನ್ನೀರ್ ಕಂದರ್ ಭೂಕುಸಿತವೂ ಉಂಟಾಗಿದೆ.
ತಿರುವನಂತಪುರದಲ್ಲ್ಲೂ ಭಾರೀ ಮಳೆಯಾಗುತ್ತಿದೆ. ರಸ್ತೆ ಮತ್ತು ತಗ್ಗು ಪ್ರದೇಶಗಳೆಲ್ಲವೂ ಜಲಾವೃತ ಗೊಂಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವುಂಟಾಗಿರು ವುದೇ ಭಾರೀ ಮಳೆ ಉಂಟಾಗಲು ಪ್ರಧಾನ ಕಾರಣವಾಗಿದೆ. ಮಳೆ ಇನ್ನೂ ಕೆಲವು ದಿನಗಳ ತನಕ ಮುಂದುವರಿಯಲಿದೆ. ಅನಗತ್ಯ ಪ್ರಯಾಣವನ್ನು ಹೊರತುಪಡಿಸ ಬೇಕೆಂದು ಕಂದಾಯ ಸಚಿವ ರಾಜನ್ ಹೇಳಿದ್ದಾರೆ.
ಶಬರಿಮಲೆ ಕ್ಷೇತ್ರ ಒಳಗೊಂ ಡಿರುವ ಪತ್ತನಂತಿಟ್ಟ ಜಿಲ್ಲೆಯಲ್ಲೂ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಯಲ್ಲಿ ಶಬರಿಮಲೆ ತೀರ್ಥಾಟಕರಲ್ಲಿ ಗರಿಷ್ಠ ಜಾಗ್ರತೆ ನೀರ್ದೇಶ ನೀಡಲಾಗಿದೆ.
ಧಾರಾಕಾರ ಮಳೆಯಿಂದಾಗಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರ ೧೨ ಜಿಲ್ಲೆಗಳಲ್ಲಿ ಜಾಗ್ರತಾ ನಿರ್ದೇಶ ನೀಡಲಾಗಿದೆ. ಈಪೈಕಿ ತಿರುವನಂತಪುರ, ಪತ್ತನಂತಿಟ್ಟ, ಎರ್ನಾಕುಳಂ, ಇಡುಕ್ಕಿ ಮತ್ತು ವಯನಾಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.