ಕೇಳುಗುಡ್ಡೆ ಶ್ರೀ ಅಯ್ಯಪ್ಪ ಮಂದಿರ ವಾರ್ಷಿಕ ಮಹೋತ್ಸವ ನಾಳೆಯಿಂದ

ಕಾಸರಗೋಡು: ಕೇಳುಗುಡ್ಡೆ ಅಯ್ಯಪ್ಪನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ವಾರ್ಷಿಕ ಮಹೋತ್ಸವ ನಾಳೆಯಿಂದ ೩೦ರ ವರೆಗೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಲಿದೆ.

ಇಂದು ಬೆಳಿಗ್ಗೆ ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನ ದಿಂದ ಹಸಿರುವಾಣಿ ಮೆರವಣಿಗೆ ಹೊರಟು ಉಗ್ರಾಣ ತುಂಬಿಸಲಾ ಯಿತು. ನಾಳೆ ಬೆಳಿಗ್ಗೆ ೮ಕ್ಕೆ ಗಣಹೋಮ, ಶುದ್ಧಿಕಲಶ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೪.೩೦ಕ್ಕೆ ಧಾರ್ಮಿಕ ಸಭೆ ನಡೆಯ ಲಿದ್ದು, ಮಂದಿರದ ಅಧ್ಯಕ್ಷ ಪವನ್ ಕುಮಾರ್ ಬಿ.ಕೆ ಅಧ್ಯಕ್ಷತೆ ವಹಿಸುವರು. ಹಿಂದೂ ಐಕ್ಯವೇದಿ ಕಾರ್ಯಕಾರಿ ಅಧ್ಯಕ್ಷ ವತ್ಸನ್ ತಿಲ್ಲಂಗೇರಿ ಧಾರ್ಮಿಕ ಭಾಷಣ ಮಾಡುವರು. ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಆಶೀರ್ವಚನ ನೀಡುವರು.  ನಟ ಕೌಶಿಕ್‌ರಾಮ ಪಾಟಾಳಿ ಬಹುಮಾನ ವಿತರಿಸು ವರು. ಹಲವರು ಉಪಸ್ಥಿತರಿರುವರು. ರಾತ್ರಿ ೭ಕ್ಕೆ ದೀಪಪ್ರತಿಷ್ಠೆ, ೮ರಿಂದ ಮಹಾಪೂಜೆ, ೮.೩೦ಕ್ಕೆ ನೃತ್ಯವೈಭವ ನಡೆಯಲಿದೆ.  ೨೯ರಂದು ಬೆಳಿಗ್ಗೆ ೭ಕ್ಕೆ ಗಣಪತಿಹೋಮ, ೮ರಿಂದ ಶ್ರೀ ಶಾಸ್ತಾ ಅಷ್ಟೋತ್ತರ ಶತನಾಮಾವಳಿ, ೯ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ೯.೩೦ಕ್ಕೆ ನಾಗತಂಬಿಲ, ಆಶ್ಲೇಷಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ೧.೩೦ರಿಂದ ಯಕ್ಷಗಾನ ಬಯಲಾಟ, ರಾತ್ರಿ ೭.೩೦ಕ್ಕೆ ದೀಪಪ್ರತಿಷ್ಠೆ, ಭಜನೆ, ೮ಕ್ಕೆ ಸಹಸ್ರ ದೀಪೋತ್ಸವ, ೯ಕ್ಕೆ ರಸಮಂಜರಿ, ೩೦ರಂದ ಬೆಳಿಗ್ಗೆ ೭ಕ್ಕೆ  ಗಣಪತಿಹೋಮ, ೯ಕ್ಕೆ ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ಮಧ್ಯಾಹ್ನ ಮಹಾಪೂಜೆ, ೧ರಿಂದ ಅನ್ನಸಂತರ್ಪಣೆ, ೧.೩೦ಕ್ಕೆ ವಿಠಲ ಶೆಟ್ಟಿ ಕೂಡ್ಲು ತಂಡದಿಂದ ಭಕ್ತಿಗಾನಸುಧಾ, ಸಂಜೆ ೬.೧೦ಕ್ಕೆ ದೀಪ  ಪ್ರತಿಷ್ಠೆ, ವಿವಿಧ ಭಜನಾ ಸಂಘದವರಿಂದ ಭಜನೆ, ರಾತ್ರಿ ೭ಕ್ಕೆ ಶೋಭಾಯಾತ್ರೆ, ೧೨.೩೦ಕ್ಕೆ ಮಹಾಪೂಜೆ, ವಿಶೇಷ ಸುಡುಮದ್ದು ಪ್ರದರ್ಶನ, ಬಳಿಕ ಮರುದಿನ ಸೂರ್ಯೋದಯಕ್ಕೆ ದೀಪ ವಿಸರ್ಜನೆ, ಮಂಗಲ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page