ಕೊಂಡೆವೂರಿನಲ್ಲಿ ಗೋ ಹೋಮಿಯೋಪತಿ ಪ್ರಥಮ ಚಿಕಿತ್ಸೆ ಮಾಹಿತಿ ಶಿಬಿರ
ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್ ಮತ್ತು ಮುಂಬಯಿಯ ದಿನೇಶ್ ಬಾಹ್ರಾ ಫೌಂಡೇಶನ್ ಸಹಯೋಗದಲ್ಲಿ ಪಶುಪಾಲನೆಯವರಿಗಾಗಿ ಗೋ ಹೋಮಿಯೋಪತಿ ಪ್ರಥಮ ಚಿಕಿತ್ಸೆ ಮತ್ತು ಮಾಹಿತಿ ಶಿಬಿರವನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗ ದರ್ಶನದಲ್ಲಿ ಆಯೋಜಿಸಲಾಗಿತ್ತು. ಮಂಗಳೂರಿನ ಪಶುವೈದ್ಯ ಮನೋ ಹರ ಉಪಾಧ್ಯಾಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಶ್ರೀಗಳು ತಮ್ಮ ಆಶೀರ್ವಚನ ನೀಡಿದರು. ಕಾಮದುಘಾ ಟ್ರಸ್ಟ್‌ನ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ ಶಿಬಿರದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲೆಯ ನಿವೃತ್ತ ಪಶುವೈದ್ಯಾಧಿಕಾರಿ ಡಾ. ಜಯಪ್ರಕಾಶ್ ಲಾಡ ಉಪಸ್ಥಿತ ರಿದ್ದರು. ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ, ಸದಾಶಿವ ಮೋಂತಿ ಮಾರು ಸ್ವಾಗತಿಸಿ, ದಿನಕರ ಹೊಸಂಗಡಿ ವಂದಿಸಿದರು. ಗಂಗಾಧರ ಕೊಂಡೆವೂರು ನಿರೂಪಿಸಿದರು.