ಕೊಂಡೆವೂರು ಮಠದಲ್ಲಿ ನವಗ್ರಹ ಪ್ರತಿಷ್ಠೆ, ಅಷ್ಟೋತ್ತರ ಸಹಸ್ರ ನವಗ್ರಹ ಯಾಗ 24ರಂದು: ಹೊರೆಕಾಣಿಕೆ ನಾಳೆ

ಉಪ್ಪಳ: ಕೊಂಡೆವೂರು  ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ  ನವಗ್ರಹ ಪ್ರತಿಷ್ಠೆ ಹಾಗೂ ಅಷ್ಟೋತ್ತರ ಸಹಸ್ರ ನವಗ್ರಹ ಯಾಗ ಈ ತಿಂಗಳ 24ರಂದು ನಡೆಯಲಿದೆ. ಇದರಂಗವಾಗಿ ಹೊರೆಕಾಣಿಕೆ ಮೆರವಣಿಗೆ ನಾಳೆ ಸಂಜೆ 4.30ಕ್ಕೆ ಉಪ್ಪಳ ಪೇಟೆಯಿಂದ ಹೊರಡಲಿದೆ. ಸಂಜೆ 5ಕ್ಕೆ ಪ್ರಾಸಾದ ಶುದ್ಧಿ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. 24ರಂದು ಮುಂಜಾನೆ ಪ್ರಾರ್ಥನೆ, ಪುಣ್ಯಾಹ ವಾಚನ, ಆಚಾರ್ಯವರಣ, ಬೆಳಿಗ್ಗೆ 7.30ಕ್ಕೆ ಅಷ್ಟೋತ್ತರ ಸಹಸ್ರ ನವಗ್ರಹ ಯಾಗ ಪ್ರಾರಂಭ, ಪೂರ್ವಾಹ್ನ 9.58ರ ಮುಹೂರ್ತದಲ್ಲಿ ನವಗ್ರಹ ಪ್ರತಿಷ್ಠೆ, 10.30ಕ್ಕೆ  ಉಡುಪಿ ಅಧಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಾರಿಂಜೆ ಶ್ರೀ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿಯ ವರಿಗೆ ಪೂರ್ಣಕುಂಭ ಸ್ವಾಗತ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ಯಶ್ಶೋ ನಾಯಕ್, ಕೆ. ನಾರಾಯಣ, ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ರಮೇಶ್‌ರಾಜು ಬೆಂಗಳೂರು,. ಡಾ. ಕೆ.ಸಿ. ರಾಮಮೂರ್ತಿ, ಡಾ. ಮೋಹನ್ ಆಳ್ವ, ಕೆ.ಕೆ. ಶೆಟ್ಟಿ, ಡಾ. ಜಿ. ರಮೇಶ್, ಪ್ರದೀಪ್ ಕುಮಾರ್ ಕಲ್ಕೂರ, ಎ.ಜೆ. ಶೇಖರ್ ತೊಕ್ಕೋಟು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.   ೧೧ರಿಂದ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ, ೧೧.೩೦ಕ್ಕೆ ನವಗ್ರಹ ಯಾಗದ ಪೂರ್ಣಾಹುತಿ, ಮಧ್ಯಾಹ್ನ ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ಅಪರಾಹ್ನ ೨.೩೦ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.  ಸೂರ್ಯಾಸ್ತಕ್ಕೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಂದ ಅಖಂಡ ಭಜನಾ ಸಪ್ತಾಹದ ದೀಪ ಪ್ರಜ್ವಲನೆ, ಬಳಿಕ ನಕ್ಷತ್ರವನದಲ್ಲಿ ದೀಪೋತ್ಸವ  ಜರಗಲಿದೆ. ೩೧ರಂದು ಸಂಜೆ  ೬.೪೦ಕ್ಕೆ ಭಜನಾ ಮಂಗಳಾಚರಣೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page