ಕೊಂಡೆವೂರು ಶ್ರೀಗಳ ಸನ್ಯಾಸ ಸ್ವೀಕಾರ ಪ್ರತಿಷ್ಠಾವರ್ಧಂತಿ
ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಪೀಠ ಪ್ರತಿಷ್ಠಾ ದಿನ ಮತ್ತು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀ ಜಿಯವರು ಸನ್ಯಾಸಾಶ್ರಮ ಸ್ವೀಕಾರ ಮಾಡಿದ 22ನೇ ವಾರ್ಷಿಕ ದಿನಾಚರಣೆ ಶ್ರೀ ವಿಷ್ಣು ಸಹಸ್ರನಾಮ ಹವನ, ಸಾಮೂಹಿಕ ಶ್ರೀ ಸತ್ಯನಾರಾ ಯಣ ಪೂಜೆಯೊಂದಿಗೆ ನಡೆಯಿತು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ದಣಿವರಿಯದೆ ಶ್ರಮಿಸಿದ ಕಾರ್ಯ ಕರ್ತರ ಕೊಡುಗೆಯನ್ನು ಸ್ಮರಿಸಿಕೊಂ ಡರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಮತ್ತು ರಾಜ್ಯಸಭಾ ಸದಸ್ಯ ಕೆ ನಾರಾಯಣ ಬೆಂಗಳೂರು ಮಾತನಾಡಿದರು. ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಭೂದಾನ ನೀಡಿದ ಕಿರಣ್ ಕುಮಾರ್ ಭಂಡಾರಿ, ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ, ಶಶಿಧರ ಶೆಟ್ಟಿ ಗ್ರಾಮಚಾವಡಿ, ಮಸ್ಕತ್‌ನ ವಿಶ್ವನಾಥನ್ ವೆಂಗರೆ, ಮಂಗಳೂರಿನ ಉದ್ಯಮಿ ಎ.ಜೆ ಶೇಖರ್ ಶುಭ ಹಾರೈ ಸಿದರು. ಇದೇ ಸಂದರ್ಭದಲ್ಲಿ ಆಶ್ರಮದ “ಆಶ್ರಯ” ಯೋಜನೆಯಡಿಯಲ್ಲಿ ಸ್ವಂತ ಭೂಮಿ ಇಲ್ಲದ ಹತ್ತು ಬಡ ಕುಟುಂಬಗಳಿಗೆ ಭೂದಾನ ನೀಡಲಾಯಿತು. ಮಂಗಳೂರು ಕರಂಗಲ್ಪಾಡಿಯ ಕಿರಣ್ ಭಂಡಾರಿ ಉದಾರ ಕೊಡುಗೆಯಾಗಿ 1 ಎಕರೆ 19 ಸೆಂಟ್ಸ್ ಭೂಮಿಯ ಹಕ್ಕು ಪತ್ರವನ್ನು ಸ್ವಾಮೀಜಿಯವರಿಗೆ ಹಸ್ತಾಂತರಿಸಿ ದರು. ಇದೇ ಸಂದರ್ಭದಲ್ಲಿ ಭಂ ಡಾರಿ ದಂಪತಿಗಳನ್ನು ಸನ್ಮಾನಿಸಲಾ ಯಿತು. ದರ್ಭೆತಡ್ಕದ ಶಂಕರ ವೇದ ವಿದ್ಯಾ ಗುರುಕುಲದ ವಿದ್ಯಾರ್ಥಿ ಗಳಿಂದ ವೇದಘೋಷದೊಂದಿಗೆ ಆರಂಭಗೊAಡ ಸಭೆಯನ್ನು ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಮೋನಪ್ಪ ಭಂಡಾರಿ ವಂದಿಸಿದರು. ದಿನಕರ ಹೊಸಂಗಡಿ, ಅಶೋಕ್ ಬಾಡೂರು ನಿರೂಪಿಸಿದರು.