ಕೊನೆಗೂ ಪೈಪ್ ದುರಸ್ತಿ: ‘ಕಾರವಲ್’ ವರದಿಗೆ ಸ್ಪಂದನೆ
ಉಪ್ಪಳ: ಬೇಕೂರು ಮರದ ಬಳಿಯಲ್ಲಿ ಹಲವು ತಿಂಗಳುಗಳಿಂದ ಪೈಪ್ ಬಿರುಕುಬಿಟ್ಟು ನೀರು ಪೋಲಾಗುತ್ತಿರುವುದಕ್ಕೆ ಕೊನೆಗೂ ಮುಕ್ತಿ ದೊರಕಿದೆ. ಅಧಿಕಾರಿಗಳ ಕಣ್ಮುಂದೆಯೇ ಪೈಪ್ ಬಿರುಕುಬಿಟ್ಟು ನೀರು ಹಾನಿಯಾಗುತ್ತಿದ್ದರೂ ದುರಸ್ತಿ ಕ್ರಮ ಕೈಗೊಳ್ಳದ ಬಗ್ಗೆ ಕಾರವಲ್ ಪತ್ರಿಕೆ ಫೋಟೋ ಸಹಿತ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಇದೀಗ ಪೈಪ್ ದುರಸ್ತಿಗೊಳಿಸಲಾಗಿದ್ದು, ಸ್ಥಳೀಯರಲ್ಲಿ ನೆಮ್ಮದಿ ಮೂಡಿಸಿದೆ.