ಕೊರಕೋಡು ಮಾರಿಗುಡಿಯಲ್ಲಿ ನವರಾತ್ರಿ ಉತ್ಸವ ನಾಳೆಯಿಂದ

ಕಾಸರಗೋಡು: ಕೊರಕೋಡು ಆರ್ಯ ಕಾತ್ಯಾಯಿನಿ ಶ್ರೀ ಮಹಾದೇವಿ ದೇವಸ್ಥಾನದಲ್ಲಿ  (ಮಾರಿಗುಡಿ) ನಾಳೆಯಿಂದ ೨೪ರವರೆಗೆ ನವರಾತ್ರಿ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನವರಾತ್ರಿ ದಿನಗಳಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ದರ್ಶನ, ರಾತ್ರಿ ಪೂಜೆ ನಡೆಯಲಿದೆ.

ನಾಳೆ ಬೆಳಿಗ್ಗೆ ಭಂಡಾರ ಆಗಮನ, ಶುದ್ದಿಕಲಶ, ಚಂಡಿಕಾಹೋಮ ಪ್ರಾರಂಭ, ಪೂರ್ಣಾಹುತಿ, ೧೭ರಂದು ರಾತ್ರಿ ೯ಕ್ಕೆ ತುಪ್ಪಸೇವೆ, ೧೮ರಂದು ರಾತ್ರಿ ೮.೩೦ಕ್ಕೆ ಹೂವಿನ ಪೂಜೆ, ೧೯ರಂದು ರಾತ್ರಿ ೮.೩೦ರಿಂದ ದೊಂದಿಸೇವೆ, ೨೦ರಂದು ಸಂಜೆ ೬ರಿಂದ ದುರ್ಗಾನಮಸ್ಕಾರ ಪೂಜೆ, ೨೧ರಂದು ಸಂಜೆ ೬ಕ್ಕೆ ಭರತನಾಟ್ಯ, ರಾತ್ರಿ ಹೂವಿನ ಪೂಜೆ, ೨೨ರಂದು ಬೆಳಿಗ್ಗೆ ೯ರಿಂದ ಬಟ್ಟಲು ಮೆರವಣಿಗೆ, ರಾತ್ರಿ ೨ರಿಂದ ಬಟ್ಟಲು ಸೇವೆ, ೨೩ರಂದು ಮುಂಜಾನೆ ೪ಕ್ಕೆ ದರ್ಶನ, ದೀಪೋತ್ಸವ, ಮಹಾದುರ್ಗ ಮೆರವಣಿಗೆ, ರಾತ್ರಿ ೧೨ ಗಂಟೆಗೆ ಆಯುಧ ಪೂಜೆ, ೨೪ರಂದು ಬೆಳಿಗ್ಗೆ ೮.೩೦ರಿಂದ ವಿದ್ಯಾರಂಭ, ಸಂಜೆ ೫ಕ್ಕೆ ಮಹಾಪೂಜೆ, ೬ಕ್ಕೆ ರಥೋತ್ಸವ, ಅವಭೃತ ಸ್ನಾನ, ಭಂಡಾರ ನಿರ್ಗಮನ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page