ಕೊಲೆ ಆರೋಪಿಯನ್ನು ಹುಡುಕಿ ಹೋದ ಪೊಲೀಸರಿಗೆ ಬೆದರಿಕೆ: ಹಲವು ಪ್ರಕರಣಗಳ ಆರೋಪಿ ಬಂಧನ
ಉಪ್ಪಳ: ಕೊಲೆ ಪ್ರಕರಣದ ಆರೋಪಿಯನ್ನು ಹುಡುಕಿಹೋದ ಪೊಲೀಸರಿಗೆ ಬೆದರಿಕೆಯೊಡ್ಡಿ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಂತೆ ಹಲವು ಪ್ರಕರಣ ಗಳಲ್ಲಿ ಆರೋಪಿಯಾದವನನ್ನು ಮಂ ಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.
ಪೈವಳಿಕೆ ನಿವಾಸಿ ಮೊಹ ಮ್ಮದ್ ಹರ್ಷಾದ್ (೨೨) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ನಿನ್ನೆ ಮಧ್ಯಾಹ್ನ ಪೈವಳಿಕೆಯಲ್ಲಿ ಈ ಘಟನೆ ನಡೆದಿದೆ. ಕೊಲೆ ಪ್ರಕರಣವೊಂದರ ಆರೋಪಿಯನ್ನು ಹುಡುಕಿಕೊಂಡು ನಿನ್ನೆ ಮಧ್ಯಾಹ್ನ ಮಂಜೇಶ್ವರ ಪೊಲೀಸ್ ಠಾಣೆಯ ಫ್ಲೈಯಿಂಗ್ ಸ್ಕ್ವಾಡ್ ಪೈವಳಿಕೆಗೆ ತೆರಳಿತ್ತು. ಆ ವೇಳೆ ರಸ್ತೆಯಲ್ಲಿ ನಿಂತಿದ್ದ ಪೊಲೀಸ್ ವಾಹನದ ಬಳಿಗೆ ತಲುಪಿದ ಮೊಹಮ್ಮದ್ ಹರ್ಷಾದ್ ಪೊಲೀಸರಿಗೆ ಬೆದರಿಕೆಯೊಡ್ಡಿ ಅಲ್ಲಿಂದ ತೆರಳುವಂತೆ ತಿಳಿಸಿ, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ದೂರಲಾಗಿದೆ. ಈ ಸಂಬಂಧ ಸಿವಿಲ್ ಪೊಲೀಸ್ ಆಫೀಸರ್ ಭವಿಷ್ ನೀಡಿದ ದೂರಿಂತೆ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಮೊಹಮ್ಮದ್ ಹರ್ಷಾದ್ ಪೋಕ್ಸೋ, ಅಪಹರಣ, ಕೊಲೆಯತ್ನ ಸಹಿತ ಐದರಷ್ಟು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.