ಕೊಲ್ಲಿ ಉದ್ಯೋಗಿಯ ಪತ್ನಿಯನ್ನು ವಶೀಕರಿಸಿ ದೌರ್ಜನ್ಯ: ಪತಿಯ ಗೆಳೆಯನ ವಿರುದ್ಧ ಕೇಸು
ಕಾಸರಗೋಡು: ಕೊಲ್ಲಿ ಉದ್ಯೋಗಿಯ ಪತ್ನಿಯನ್ನು ವಶೀಕರಿಸಿ ಕಲ್ಲಿಕೋಟೆ ವಸತಿಗೃಹಕ್ಕೆ ತಲುಪಿಸಿ ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. 25ರ ಹರೆಯದ ಯುವತಿ ನೀಡಿದ ದೂರಿನಂತೆ ಪತಿಯ ಗೆಳೆಯ ಹಾಗೂ ಕಾಸರಗೋಡು ನಗರ ಠಾಣೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಿವಾಸಿಯಾದ ಯುವಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾನಭಂಗ ಪ್ರಕರಣದಲ್ಲಿ ಕೇಸು ದಾಖಲಿಸಲಾಗಿದೆ. 2024 ಡಿಸೆಂಬರ್‌ನಲ್ಲಿ ಘಟನೆ ನಡೆದ ಬಗ್ಗೆ ತಿಳಿದು ಬಂದಿದೆ. ಪತಿಯ ಗೆಳೆಯ ಹಾಗೂ ಸಂಬಂಧಿಕನಾದ ಯುವಕ ದೂರುದಾರೆಯಾದ ಯುವತಿಯನ್ನು ಕಲ್ಲಿಕೋಟೆಯ ವಸತಿಗೃಹದಲ್ಲಿ ಮಾನಭಂಗ ಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.