ಕೋಳಿಕ್ಕಾಲು ಕ್ಷೇತ್ರ ಸಮಿತಿ ಪದಾಧಿಕಾರಿಗಳಿಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟಿ
ಮುಳ್ಳೇರಿಯ: ಕಾನಕ್ಕೋಡು ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಪದಾಧಿಕಾರಿಗಳು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಭೇಟಿಯಾದ ತಂಡದಲ್ಲಿ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ ಮಣಿಯಾಣಿ ಕೋಳಿಕ್ಕಾಲು, ಪ್ರಧಾನ ಕಾರ್ಯದರ್ಶಿ ಕೇಶವ ಕೆ. ಕೋಳಿಕ್ಕಾಲು, ಮಹಿಳಾ ಸಮಿತಿ ಅಧ್ಯಕ್ಷೆ ರೋಹಿಣಿ ಚಂದ್ರನ್, ಕಾರ್ಯದರ್ಶಿ ದೇವಾನಂದ ಶೆಟ್ಟಿ ಕಾನಕ್ಕೋಡು, ಬಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸಂತೋಷ್ ರೈ ಗಾಡಿಗುಡ್ಡೆ, ಸೇವಾ ಸಮಿತಿ ಸದಸ್ಯ ಸುರೇಶ್ ಕಾನಕ್ಕೋಡು, ಶಾರದಾ ಕೋಳಿಕ್ಕಾಲು ಇದ್ದರು.