ಕೋಳಿತ್ಯಾಜ್ಯ ಸಂಸ್ಕರಣೆ ಪ್ಲಾಂಟ್ನಿಂದ ದುರ್ನಾತ: ಕ್ರಿಯಾ ಸಮಿತಿಯಿಂದ ಚಳವಳಿ
ಕುಂಬಳೆ: ಅನಂತಪುರ ಕೈಗಾರಿಕಾ ಪಾರ್ಕ್ನಲ್ಲಿ ಕಾರ್ಯಾ ಚರಿಸುವ ಕೋಳಿ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್ನಿಂದ ಹೊರಸೂಸುವ ದುರ್ನಾತಕ್ಕೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಚಳವಳಿಗೆ ಮುಂದಾಗಿದೆ. ಇದರಂತೆ ಸೇವ್ ಅನಂತಪುರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅಕ್ಟೋಬರ್ ೨ರಂದು ಕೈಗಾರಿಕಾ ಘಟಕದ ಮುಂದೆ ಅನಿರ್ದಿಷ್ಟಾವಧಿ ಚಳವಳಿ ಆರಂಭಗೊಳ್ಳಲಿದೆ. ಜಿಲ್ಲಾಧಿಕಾರಿ ಸಹಿತ ವಿವಿಧ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಚಳವಳಿಗೆ ಮುಂದಾ ಗಿರುವುದಾಗಿ ಕ್ರಿಯಾ ಸಮಿತಿ ಅಧ್ಯಕ್ಷ ಟಿ. ಶರೀಫ್, ಕಾರ್ಯದರ್ಶಿ ಸುನಿಲ್ ಅನಂತಪುರ, ಉಪಾಧ್ಯಕ್ಷ ಎ.ಕೆ. ಅಶ್ರಫ್, ಸ್ವಾಗತ್ ಸೀತಾಂಗೋಳಿ, ಪುತ್ತಿಗೆ ಪಂಚಾಯತ್ ಸದಸ್ಯ ಜನಾರ್ದನನ್ ಎಂಬಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.