ಕೋಳಿ ಅಂಕಕ್ಕೆ ದಾಳಿ: ಆರು ಮಂದಿ ಸೆರೆ, ೮ ಕೋಳಿ ವಶ

ಮಂಜೇಶ್ವರ: ಕೋಳಿಅಂಕ ನಡೆಯುತ್ತಿದ್ದ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ೮ ಕೋಳಿಯನ್ನು ವಶಪಡಿಸಿ, ಆರು ಮಂದಿಯನ್ನು ಸೆರೆ ಹಿಡಿದಿದ್ದಾರೆ. ಇವರಿಂದ ೪೭೦೦ ರೂ. ವಶಪಡಿಸಲಾಗಿದೆ.

ನಿನ್ನೆ ಸಂಜೆ ಕಡಂಬಾರ್ ಹೊಸಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿದ್ದಾಗ ಎಸ್‌ಐ ನಿಖಿಲ್ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಬಾಳಿಯೂರು ನಿವಾಸಿ ರಾಜೀವ, ಚಿಗುರುಪಾದೆಯ ಹರೀಶ, ಸಂತೋಷ್ ಮಜಿಬೈಲ್, ರಾಜೇಶ್ ಮಜಿಬೈಲ್, ಪುಷ್ಪರಾಜ ಶೆಟ್ಟಿ ಹೊಸಕಟ್ಟೆ, ಸಂದೀಪ್ ಕುಂಜತ್ತೂರುನನ್ನು ಸೆರೆ ಹಿಡಿಯಲಾಗಿದೆ. ಹಲವರು ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಪೊಲೀಸರಾದ ಚಂದ್ರಕಾಂತ್, ಅಪ್ಸಲ್, ಸುಭಾಶ್, ಮಹೇಶ್ ಭಾಗವಹಿಸಿದ್ದರು. ಕೋಳಿಯನ್ನು ಠಾಣೆಯಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page