ಕೋಳಿ ಅಂಕ ಕೇಂದ್ರಕ್ಕೆ ಪೊಲೀಸ್ ದಾಳಿ: ಇಬ್ಬರ ಸೆರೆ, ನಾಲ್ಕು ಹುಂಜ ವಶಕ್ಕೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಮಜಾಲ್‌ನಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಕೇಂದ್ರಕ್ಕೆ ಕಾಸರಗೋಡು ಪೊಲೀಸ್ ಠಾಣೆ ಎಸ್‌ಐ ಚಂದ್ರಶೇಖರನ್‌ರ ನೇತೃತ್ವದ ಪೊಲೀಸರು ನಿನ್ನೆ ಸಂಜೆ ದಾಳಿ ನಡೆಸಿ, ನಾಲ್ಕು ಹುಂಜಗಳನ್ನು ಮತ್ತು ೬೦೦ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಕೂಡ್ಲು ಗೋಪಾಲಕೃಷ್ಣ ದೇವಸ್ಥಾನ ಬಳಿಯ ಪ್ರಶಾಂತ್ ಕೆ. ಮತ್ತು ಕಲ್ಲಕಟ್ಟೆಯ ಜಯಶಂಕರ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ದಾಳಿ ನಡೆಸುತ್ತಿದ್ದ ವೇಳೆ ಕೋಳಿ ಅಂಕದಲ್ಲಿ ನಿರತರಾಗಿದ್ದ ಇತರ ಹಲವರು ಪರಾರಿಯಾದರೆಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ ಜೂಜಾಟ ಕೇಂದ್ರದಿಂದ ಕೋಳಿಗಳ ಕಾಲಿಗೆ ಕಟ್ಟುವ ಎರಡು ಬಾಳುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಪಡಿಸಲಾದ ಕೋಳಿಗಳನ್ನು ಇಂದು ನ್ಯಾಯಾಲ ಯದಲ್ಲಿ ಹಾಜರುಪಡಿಸಲಾ ಗುವುದೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page