ಬದಿಯಡ್ಕ: ಬೆಳಿಂಜ ಬಸ್ ನಿಲ್ದಾಣ ಸಮೀಪ ನಿನ್ನೆ ಸಂಜೆ ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂರು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಎರಡು ಕೋಳಿ ಗಳನ್ನು ವಶಪಡಿ ಸಲಾಗಿದೆ. ಬೆಳಿಂಜ ನಿವಾಸಿಗಳಾದ ಕಿಶೋರ್ (34), ರಘುನಾಥ ಶೆಟ್ಟಿ (35), ಪ್ರಶಾಂತ್ ಶೆಟ್ಟಿ (40) ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ.