ಕೋವಿಡ್‌ನ ಹೊಸ ರೂಪಾಂತರಿ ಚೀನಾದಲ್ಲಿ ಪತ್ತೆ

ಬೀಜಿಂಗ್: ಬಾವಲಿಗಳಿಂದ ಹರಡಲು ಸಾಧ್ಯತೆಯುಳ್ಳ ಕೋವಿಡ್‌ನ ಹೊಸ ರೂಪಾಂತರಿ ಚೀನಾದಲ್ಲಿ ಪತ್ತೆಹಚ್ಚಲಾಗಿದೆ. HKU5-Cov-2 ಎಂದು ಇದನ್ನು ಹೆಸರಿಸಲಾಗಿದೆ. ಕೋವಿಡ್‌ಗೆ ಕಾರಣವಾದ  SARS-Cov-2  ರ ಅದೇ ಸಾಮರ್ಥ್ಯ ಈ ವೈರಸ್‌ಗಿದೆಯೆಂದು ಹೇಳಲಾಗುತ್ತಿದೆ. ಹೊಸ ವೈರಸ್‌ಗೆ ಮನುಷ್ಯರಿಗೆ ರೋಗ ಹರಡಿಸಬಹುದಾದ ಶಕ್ತಿಯಿದ್ದರೂ ಪ್ರಾಣಿಗಳಿಂದ ಮನುಷ್ಯರಿಗೆ ರೋಗ ಹರಡಬಹುದೇ ಎಂದು  ಸಂಶಧನೆ  ನಡೆಯುತ್ತಿದೆ. ಈಗಾಗಲೇ ಕೋವಿಡ್‌ನ ಹಲವು ರೂಪಾಂತರಿಗಳು ಪತ್ತೆಯಾಗಿದ್ದರೂ ಅವುಗಳಲ್ಲಿ ಕೆಲವು ಮಾತ್ರವೇ ಮನುಷ್ಯರಿಗೆ ಹರಡಿರುತ್ತದೆ.

Leave a Reply

Your email address will not be published. Required fields are marked *

You cannot copy content of this page