ಕ್ರಶರ್ ಕಾರ್ಮಿಕ ಕುಸಿದುಬಿದ್ದು ಮೃತ್ಯು
ನೀರ್ಚಾಲು: ಕಗ್ಗಲ್ಲು ಕ್ರಶರ್‌ನ ಕಾರ್ಮಿಕ ಮನೆಗೆ ನಡೆದು ಹೋಗುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬೇಳ ನಿವಾಸಿ ಶಂಕರ ಪ್ರಸಾದ್ ರೈ (60) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನೀರ್ಚಾಲು ಬಳಿ ಪೂವಾಳೆಯಲ್ಲಿ ರುವ ಸ್ಟಾರ್ ಮೆಟಲ್ ಕ್ರಶರ್‌ನ ಕಾರ್ಮಿಕನಾಗಿದ್ದಾರೆ. ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ನಡೆದು ಹೋಗುತ್ತಿದ್ದ ವೇಳೆ ನೀರ್ಚಾಲು ಪೇಟೆ ಸಮೀಪ ರಸ್ತೆ ಬದಿ ಕುಸಿದು ಬಿದ್ದಿದ್ದರು. ಕೂಡಲೇ ನಾಗರಿಕರು ಅವರನ್ನು ಕಾಸ ರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ನಾರಾಯಣ ರೈ-ದುಗ್ಗಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಶಾರದ, ಮಕ್ಕಳಾದ ವೀಣಾ, ನಯನ, ವಿನಯ, ಅಳಿಯಂದಿರಾದ ರವಿ, ವಿನಯ ಕುಮಾರ್, ಸಹೋದರ-ಸಹೋದರಿಯರಾದ ಪ್ರಕಾಶ್ ರೈ, ರಾಧಾಕೃಷ್ಣ ರೈ, ಸುನಂದ, ಗುಲಾಬಿ, ಬೇಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.