ಕ್ರಿಕೆಟ್ ಇತಿಹಾಸ ಸುನಿಲ್ ಗವಾಸ್ಕರ್ ಫೆ. 21ರಂದು ಕಾಸರಗೋಡಿಗೆ
ಕಾಸರಗೋಡು: ಭಾರತೀಯ ಕ್ರಿಕೆಟ್ ಕ್ರೀಡಾ ಲೋಕದ ಇತಿಹಾಸ ಸುನಿಲ್ ಗವಾಸ್ಕರ್ ಈ ತಿಂಗಳ 21ರಂದು ಕಾಸರಗೋಡಿಗೆ ಆಗಮಿಸು ವರು. ನಗರಸಭೆ ವಿದ್ಯಾನಗರದಲ್ಲಿರುವ ನಗರಸಭಾ ಕ್ರೀಡಾಂಗಣಕ್ಕೆ ನೂತನ ವಾಗಿ ನಿರ್ಮಿಸಲಾಗಿರುವ ರಸ್ತೆಗೆ ಸುನಿಲ್ ಗವಾಸ್ಕರ್‌ರ ಹೆಸರು ಇರಿಸಲಾಗಿದೆ. ಅದರ ಉದ್ಘಾಟನೆ ಯನ್ನು ಸ್ವತಃ ಸುನಿಲ್ ಗವಾಸ್ಕರ್ ಅವರೇ ಈತಿಂಗಳ 21ರಂದು ನೆರವೇರಿಸುವರು. ಈ ರಸ್ತೆಗೆ ಗವಾಸ್ಕರ್‌ರ ಹೆಸರು ಇರಿಸಲು ಜ. 30ರಂದು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂರ ಅಧ್ಯಕ್ಷತೆಯಲ್ಲಿ ನಡೆದ ನಗರಸಭಾ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿ ಸಲಾಗಿತ್ತು.
ಕ್ರೀಡಾ ಪ್ರವಾಸೋದ್ಯಮದ ಬೆಳವಣಿಗೆ ಇದರಿಂದ ಸಾಧ್ಯವಾಗಲಿದೆ ಯೆಂದು ನಗರಸಭಾ ಅಧಕ್ಷರು ಹೇಳಿದ್ದಾರೆ. ಗವಾಸ್ಕರ್‌ರ ಸ್ನೇಹಿತ ಹಾಗೂ ಕಣ್ಣೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಮಂಡಳಿ ಸದಸ್ಯರಾಗಿರುವ ಖಾದರ್ ತೆರುವತ್ತ್ ರೊಂದಿಗೆ ಗವಾಸ್ಕರ್ ಫೆ. 21ರಂದು ಕಾಸರಗೋಡಿಗೆ ಆಗಮಿಸುವರು.
ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷರು ಹಾಗೂ ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಕಾರ್ಯನಿರ್ವಹಣಾ ಅಧಕ್ಷ ಹಾಗೂ ಕಾರ್ಯದರ್ಶಿ ಅಬ್ದುಲ್ ಜಲೀಲ್, ಪ್ರಧಾನ ಸಂಚಾಲಕರಾಗಿರುವ ಸಮಿತಿಗೆ ರೂಪು ನೀಡಲಾಗಿದೆ. ಎ. ಶಾಫಿ ಇವರನ್ನು ವರ್ಕಿಂಗ್ ಕನ್ವೀನರ್ ಹಾಗೂ ಕೆ.ಎಂ. ಅಬ್ದುಲ್ ರಹಿಮಾನ್‌ರನ್ನು ಸಮಿತಿಯ ಕೋಶಾಧಿಕಾರಿಯಾಗಿ ಆರಿಸಲಾಗಿದೆ.