ಕ್ರಿಪ್ಟೋ ಕರೆನ್ಸಿ ಠೇವಣಿ ವಂಚನೆ : ಕುಂಬಳೆ ನಿವಾಸಿ ಮಲಪ್ಪುರದಲ್ಲಿ ಸೆರೆ
ಕಾಸರಗೋಡು: 1800 ಕೋಟಿ ರೂ.ಗಳ ಮೋರಿಸ್ ಕಾಯಿನ್ ನಕಲಿ ಕ್ರಿಪ್ಟೋ ಕರೆನ್ಸಿ ಠೇವಣಿ ವಂಚನೆ ಪ್ರಕರ ಣದಲ್ಲಿ ಇನ್ನೋರ್ವ ಸೆರೆಯಾಗಿದ್ದಾನೆ. ಕುಂಬಳೆ ನಿವಾಸಿ ಕೆ.ಎ. ಮುಹಮ್ಮದ್ ಇರ್ಷಾದ್ (37)ನನ್ನು ಮಲಪ್ಪುರಂ ಕ್ರೈಮ್ ಬ್ರಾಂಚ್ ಬಂಧಿಸಿದೆ. ಏಜೆಂಟ್ ಆಗಿದ್ದ ಈತ 93 ಕೋಟಿ ರೂ. ಸಂಗ್ರಹಿಸಿ ಪ್ರಥಮ ಆರೋಪಿಯ ವಿವಿಧ ಬ್ಯಾಂಕ್ನ ಖಾತೆಗಳಿಗೆ ಕಳುಹಿಸಿಕೊಟ್ಟಿರುವುದಾಗಿ ಪತ್ತೆಹಚ್ಚಲಾಗಿತ್ತು. ಈತನ ಬಂಧನದೊAದಿಗೆ ಈ ಪ್ರಕರಣದಲ್ಲಿ 9 ಮಂದಿಯನ್ನು ಸೆರೆಹಿಡಿದಂತಾಗಿದೆ. ಒಟ್ಟು 17 ಆರೋಪಿಗಳಿರುವ ಈ ಪ್ರಕರಣದಲ್ಲಿ 11ನೇ ಆರೋಪಿಯಾಗಿದ್ದಾನೆ ಮೊಹಮ್ಮದ್ ಇರ್ಷಾದ್. ಪ್ರಥಮ ಆರೋಪಿ ಪೂಕೋಟುಪಾಡಂ ತೋಟುಕ್ಕರ ನಿಶಾದ್ (39) ತಲೆ ಮರೆಸಿಕೊಂಡಿದ್ದಾನೆ. 15,000 ರೂ. ಠೇವಣಿ ಇರಿಸಿದರೆ ದಿನದಲ್ಲಿ 270 ರೂ.ನಂತೆ 300 ದಿವಸ ಲಾಭ ಪಡೆಯಬಹುದೆಂದು ಠೇವಣಿಯನ್ನು ಕ್ರಿಪ್ಟೋ ಕರೆನ್ಸಿ ಮೂಲಕ ಲಭ್ಯಗೊಳಿಸಲಾಗುವುದೆಂದು ಭರವಸೆ ನೀಡಿ ವಂಚಿಸಲಾಗಿತ್ತು. ಸೇರಿದವರೆಲ್ಲಾ ಲಾಭ ಲಭಿಸದ ಹಿನ್ನೆಲೆಯಲ್ಲಿ ಪೊಲೀಸರನ್ನು ಸಮೀಪಿಸಿದ್ದು, ವಂ ಚನೆ ಬಹಿರಂಗಗೊAಡಿದೆ. ಆರೋ ಪಿಗೆ ಮಂಜೇರಿ ನ್ಯಾಯಾಲಯ ರಿಮಾಂಡ್ ವಿಧಿಸಿದೆ.