ಕ್ರಿಸ್ಮಸ್‌ಗೆ ಸ್ಪೆಷಲ್ ಅಕ್ಕಿ

ತಿರುವನಂತಪುರ: ಕ್ರಿಸ್ಮಸ್ ಹಬ್ಬದ ಸಲುವಾಗಿ ನೀಲಿ ಮತ್ತು ಬಿಳಿ ಬಣ್ಣದ ರೇಶನ್ ಕಾರ್ಡ್‌ಗಳಿಗೆ ಸ್ಪೆಷಲ್ ಅಕ್ಕಿ ವಿತರಿಸಲು ರಾಜ್ಯ ಸರಕಾರ ತೀರ್ಮಾ ನಿಸಿದೆ. ಇದರಂತೆ ನೀಲಿ ಬಣ್ಣದ ರೇಶನ್ ಕಾರ್ಡ್‌ನ ಪ್ರತೀ ಸದಸ್ಯರಿಗೆ ತಲಾ ಎರಡು ಕಿಲೋ ಅಕ್ಕಿಯನ್ನು ಕಿಲೋಕ್ಕೆ ೪ ರೂ. ದರದಲ್ಲೂ, ೧೦.೯೦ ರೂ. ದರದಲ್ಲಿ  ಮೂರು ಕಿಲೋ ಅಕ್ಕಿ ವಿತರಿಸಲಾಗುವುದು. ಇದೇ ರೀತಿ ಬಿಳಿ ಕಾರ್ಡುದಾರರಿಗೆ ಕಿಲೋಗೆ ೧೦.೯೦ ರೂ. ದರದಲ್ಲಿ ತಲಾ ಆರು ಕಿಲೋದಂತೆ ಅಕ್ಕಿ ವಿತರಿಸಲಾಗುವುದೆಂದು ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page