ಕ್ವಾರ್ಟರ್ಸ್‌ನಿಂದ ಭಾರೀ ಪ್ರಮಾಣದ ಪಾನ್ ಮಸಾಲೆ ವಶ: ಓರ್ವ ಸೆರೆ

ಕುಂಬಳೆ: ಕ್ವಾರ್ಟರ್ಸ್‌ನಲ್ಲಿ ದಾಸ್ತಾನಿರಿಸಿದ್ದ ೮೮೧೬ ಪ್ಯಾಕೆಟ್ ನಿಷೇಧಿತ ಪಾನ್ ಮಸಾಲೆಯನ್ನು ಕುಂಬಳೆ ಇನ್‌ಸ್ಪೆಕ್ಟರ್ ಇ. ಅನೂಪ್ ನೇತೃತ್ವದ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಅಡ್ಕಬೈದಲ ಎಂಬಲ್ಲಿರುವ ಕ್ವಾರ್ಟರ್ಸ್ ನಿಂದ ಪಾನ್ ಮಸಾಲೆ ವಶಪಡಿಸಲಾಗಿದೆ.  ಈ ಸಂಬಂಧ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಬದರುಲ್ ಮುನೀರ್ (೪೦) ಎಂಬಾತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

ಕ್ವಾರ್ಟರ್ಸ್ ಕೇಂದ್ರೀಕರಿಸಿ ಪಾನ್ ಮಸಾಲೆ ಮಾರಾಟ ನಡೆಯುತ್ತಿದೆಯೆಂಬ ಗುಪ್ತ ಮಾಹಿತಿ  ಲಭಿಸಿದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕ್ವಾರ್ಟರ್ಸ್‌ನಲ್ಲಿ ಬಚ್ಚಿಡಲಾಗಿದ್ದ ಪಾನ್ ಮಸಾಲೆ ಪತ್ತೆಯಾಗಿದೆ. ಕೇರಳದಲ್ಲಿ ಮಾರಾಟ ನಿಷೇಧಿಸಲಾದ ಈ ಪಾನ್ ಮಸಾಲೆಯನ್ನು ಭಾರೀ ಪ್ರಮಾಣದಲ್ಲಿ ಕರ್ನಾಟಕದಿಂದ ತಂದು ಕ್ವಾರ್ಟರ್ಸ್‌ನಲ್ಲಿ ದಾಸ್ತಾನಿರಿಸಿ  ಬಳಿಕ ಚಿಲ್ಲರೆಯಾಗಿ  ಮಾರಾಟಗೈ ಯ್ಯುತ್ತಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page