ಕ್ವಾರ್ಟರ್ಸ್‌ನಿಂದ 1ಲಕ್ಷ ರೂ. ಕಳವು
ಕಾಸರಗೋಡು: ಕ್ವಾರ್ಟರ್ಸ್ ನೊಳಗೆ ಡಬ್ಬದಲ್ಲಿರಿಸಿದ್ದ 1 ಲಕ್ಷ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಅಣಂಗೂರಿನ ರಾಸಿಕ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಕರ್ನಾಟಕದ ವಿಜಯಪುರ ನೆರಬೆಂಜು ಎಂಬಲ್ಲಿನ ರಮಣ ಸಿದ್ಧಪ್ಪ ಎಂಬವರ ದೂರಿನಂತೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಮಣ ಸಿದ್ಧಪ್ಪ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದು, ಸಂಜೆ 6 ಗಂಟೆಗೆ ಮರಳಿದ್ದರು. ಈ ವೇಳೆ ಹಣ ಕಳವಿಗೀಡಾಗಿರುವುದು ಅರಿವಿಗೆ ಬಂದಿದೆ. ಕ್ವಾರ್ಟರ್ಸ್‌ನ ಸೀಲಿಂಗ್ ಅಳವಡಿಸದ ಭಾಗದಲ್ಲಾಗಿ ಕಳ್ಳ ಒಳಗೆ ನುಗ್ಗಿದ್ದಾನೆಂದು ಅಂದಾಜಿಸಲಾಗಿದೆ. ಹಣ ಇರಿಸಿರುವ ಬಗ್ಗೆ ತಿಳಿದಿರುವ ಯಾರೋ ಈ ಕಳವಿನ ಹಿಂದಿದ್ದಾರೆಂದು ಸಂಶಯಿಸಲಾಗುತ್ತಿದೆ.