ಕ್ಷೇತ್ರ ಸಮಿತಿ ಪದಾಧಿಕಾರಿಯ ಸ್ಕೂಟರ್‌ಗೆ ಕಿಚ್ಚಿರಿಸಿದ ಅಕ್ರಮಿಗಳು

ಕಾಸರಗೋಡು: ಪಡನ್ನ ತೈಕಾಟ್ ಮುತ್ತಪ್ಪನ್ ಮಡಪ್ಪುರ ಕ್ಷೇತ್ರದ ಆಡಳಿತ ಸಮಿತಿ ಪದಾಧಿಕಾರಿ ಪಿ.ವಿ. ರವಿಯವರ ಮನೆ ಮುಂದೆ ನಿಲ್ಲಿಸಲಾಗಿದ್ದು ಅವರ ಪತ್ನಿಯ ಮಾಲಕತ್ವದಲ್ಲಿರುವ ಸ್ಕೂಟರ್‌ಗೆ ಅಕ್ರಮಗಳು ರಾತ್ರಿ ಮರೆಯಲ್ಲಿ ಪೆಟ್ರೋಲ್ ಸುರಿದು ಕಿಚ್ಚಿರಿಸಿ ಹಾನಿಗೊಳಿಸಿದ್ದಾರೆ.

ಈ ಬಗ್ಗೆ ನೀಡಲಾದ ದೂರಿನಂತೆ ಚಂದೇರಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಈ ಹಿಂದೆಯೂ ಇದೇ ವಾಹನಕ್ಕೆ ಅಕ್ರಮಿಗಳು ಕಿಚ್ಚಿರಿಸಿದ್ದರು.

Leave a Reply

Your email address will not be published. Required fields are marked *

You cannot copy content of this page