ಖಾಲಿ ಹುದ್ದೆ ವರದಿ ನೀಡಲು ಮನಃಪೂರ್ವಕ ವಿಳಂಬ ದೂರು: ಜಿಲ್ಲೆಯ ಹೈಯರ್ ಸೆಕೆಂಡರಿ ಅಧ್ಯಾಪಕ ನೇಮಕಾತಿ ವಿಳಂಬ ಪರಿಶೀಲಿಸಬೇಕೆಂದು ಮಾನವಹಕ್ಕು ಆಯೋಗ
ಕಾಸರಗೋಡು: ಹೈಯರ್ ಸೆಕೆಂಡರಿ ಅಧ್ಯಾಪಕ ಹುದ್ದೆಗಳಿಗೆ ನೇಮಕಾತಿ ನಡೆಸಲಿರುವ ಕಾಲವಿಳಂಬ ಪರಿಶೀಲಿಸಬೇಕೆಂದು ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯ ಕೆ. ಬೈಜುನಾಥ್ ಆಗ್ರಹಿಸಿದ್ದಾರೆ. ಎಕಾನಾಮಿಕ್ಸ್, ಪೊಲಿಟಿಕಲ್ ಸಯನ್ಸ್ ವಿಭಾಗಗಳ ಅಧ್ಯಾಪಕ ಹುದ್ದೆಗಳಲ್ಲಿ ಪಿಎಸ್‌ಸಿ ರ‍್ಯಾಂಕ್ ಲಿಸ್ಟ್‌ನಲ್ಲಿ ಒಳಗೊಂಡ ಉದ್ಯೋಗಾರ್ಥಿಗಳಿಗೆ ನೇಮಕಾತಿ ನೀಡಲು ಸಾಧ್ಯವಾಗದ ರೀತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ (ಹೈಯರ್ ಸೆಕೆಂಡರಿ ವಿಭಾಗ) ಖಾಲಿ ಹುದ್ದೆಗಳಿನ್ನು ವರದಿ ಮಾಡಲು ಮನಃಪೂರ್ವಕ ಕಾಲವಿಳಂಬ ಮಾಡುತ್ತಿರುವುದಾಗಿ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಲಾಗಿದೆ.
ಎಕಾನಾಮಿಕ್ಸ್ ವಿಭಾಗ (ಜ್ಯೂನಿಯರ್) ರ‍್ಯಾಂಕ್ ಪಟ್ಟಿಯಿಂದ ಓರ್ವನನ್ನು ಕೂಡಾ ನೇಮಕಗೊಳಿಸಿಲ್ಲ. ಇದರಲ್ಲಿ 105 ಖಾಲಿ ಹುದ್ದೆಗಳು ಇವೆ. ಹುದ್ದೆ ಬದಲಾವಣೆ ಮೂಲಕ 25 ಶೇಕಡಾ ಮಾತ್ರವೇ ನೇಮಕಾತಿ ನಡೆಸಬಹುದು ಎಂದಿರುವಾಗ ಕಾನೂನು ವಿರುದ್ಧವಾಗಿ ಹೆಚ್ಚುವರಿ ಹುದ್ದೆಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಪೊಲಿಟಿಕಲ್ ಸಯನ್ಸ್ ವಿಭಾಗದಲ್ಲೂ ಇದೇ ಸ್ಥಿತಿ ಇದೆ. ಖಾಲಿ ಹುದ್ದೆಗಳನ್ನು ಸರಿಯಾಗಿ ಪಿಎಸ್‌ಸಿಗೆ ವರದಿ ಮಾಡಬೇಕೆಂಬ ಕಾನೂನು ಜ್ಯಾರಿಯಲ್ಲಿರುವಾಗ ಖಾಲಿ ಹುದ್ದೆಗಳ ಬಗ್ಗೆ ವರದಿ ನೀಡಲಾಗುತ್ತಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಶಿಕ್ಷಣ ನಿರ್ದೇಶಕ ದೂರನ್ನು ಪರಿಶೀಲಿಸಿ ೩೦ ದಿನದೊಳಗೆ ವರದಿ ಸಲ್ಲಿಸಬೇಕೆಂದು ಆಯೋಗ ಆಗ್ರಹಿಸಿದೆ. ಮುಂದಿನ ತಿಂಗಳು ಕಾಸರಗೋಡು ಸರಕಾರಿ ಅತಿಥಿ ಮಂದಿರದಲ್ಲಿ ನಡೆಯುವ ಸಿಟ್ಟಿಂಗ್ ನಲ್ಲಿ ಈ ಕೇಸನ್ನು ಪರಿಗಣಿಸಲಾಗು ವುದು. ಕಳೆದ ಫೆಬ್ರವರಿಯಲ್ಲಿ ರ‍್ಯಾಂಕ್ ಯಾದಿ ಪ್ರಕಟಿಸಲಾಗಿತ್ತು.