ಗಗನಕ್ಕೇರುತ್ತಿರುವ ಬೆಳ್ಳುಳ್ಳಿ ಬೆಲೆ

ಕಾಸರಗೋಡು: ರಾಜ್ಯದಲ್ಲಿ ಬೆಳ್ಳುಳ್ಳಿ ಬೆಲೆ ಅನಿಯಂತ್ರಿತ ರೀತಿಯಲ್ಲಿ ಹೆಚ್ಚುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇದೀಗ ಒಂದು ಕಿಲೋ ಬೆಳ್ಳುಳ್ಳಿ ಬೆಲೆ ೪೪೦ರಿಂದ ೪೮೦ ರೂ. ವರೆಗೆ ತಲುಪಿದೆ. ಒಂದು ತಿಂಗಳ ಹಿಂದೆ ೩೦೦ ರಿಂದ ೩೫೦ ರೂ. ವರೆಗಿದ್ದ ಬೆಳ್ಳುಳ್ಳಿ ಬೆಲೆ    ಕೆಲವೇ ದಿನಗಳಲ್ಲಿ ಕಿಲೋಗೆ ೧೦೦ರಿಂದ ೧೫೦ ರೂ. ವರೆಗೆ ಹೆಚ್ಚಳವಾಗಿದೆ.  ಇದೇ ವೇಳೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳ್ಳುಳ್ಳಿಗೆ ವ್ಯತ್ಯಸ್ಥ ಬೆಲೆಯಿದೆಯೆಂದು ತಿಳಿದುಬಂದಿದೆ. ಕುಂಬಳಯಲ್ಲಿ ಒಂದು ಕಿಲೋ ಬೆಳ್ಳುಳ್ಳಿಗೆ ೪೩೦ ರೂ. ಬೆಲೆಯಿದೆ. ಇದೇ ವೇಳೆ ನೀರ್ಚಾಲು, ಬದಿಯಡ್ಕ, ಮುಳ್ಳೇರಿಯ, ಕುಂಡಂ ಕುಳಿ, ಬಂದಡ್ಕ ಎಂಬಿಡೆಗಳಲ್ಲಿ ೪೪೦ ರೂ.,  ಪೆರ್ಲದಲ್ಲಿ ೪೮೦ ರೂ.  ಬೆಲೆಗೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿಗೆ ಇಷ್ಟು ಬೆಲೆಯೇರಿಕೆ ಇದು ಪ್ರಥ ಮವಾಗಿದೆ ಯೆಂದೂ ವ್ಯಾಪಾರಿಗಳು ತಿಳಿಸುತ್ತಿದ್ದಾರೆ.

ಜಿಲ್ಲೆಗೆ ಪ್ರಧಾನವಾಗಿ ತಮಿಳು ನಾಡು, ಗುಜರಾತ್, ರಾಜಸ್ಥಾನ ರಾಜ್ಯಗಳಿಂದ ಬೆಳ್ಳುಳ್ಳಿ ತರಲಾಗುತ್ತಿದೆ. ಬೆಳ್ಳುಳ್ಳಿ ಬೆಳೆಯುವ  ರಾಜ್ಯ ಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಂಡಿರುವುದೇ ಬೆಲೆ ಯೇರಿಕೆಗೆ ಕಾರಣವೆಂದು ತಿಳಿಸಲಾ ಗುತ್ತಿದೆ. ಬೆಳ್ಳುಳ್ಳಿ ಬೆಲೆಯೇರಿಕೆ ಗ್ರಾಹ ಕರಲ್ಲಿ ಭಾರೀ ಸಮಸ್ಯೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

You cannot copy content of this page