ಗದ್ದೆಯಲ್ಲಿ ಕೆಲಸ ನಿರತರಾಗಿದ್ದ ಕೃಷಿಕ ಕುಸಿದು ಬಿದ್ದು ಮೃತ್ಯು

ಮಂಜೇಶ್ವರ: ಗದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೇ ಕೃಷಿಕರೊಬ್ಬರು ಕುಸಿದುಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕಡಂಬಾರ್ ನಿವಾಸಿ ಕೃಷ್ಣಪ್ಪ ಪೂಜಾರಿ (೭೨) ಎಂಬವರು ಮೃತಪಟ್ಟ ವ್ಯಕ್ತಿ. ಹಿರಿಯ ಕೃಷಿಕರಾಗಿರುವ ಇವರು ನಿನ್ನೆ ಸಂಜೆ ಗದ್ದೆಯಲ್ಲಿ  ಪೈರು ಕೊಯ್ಯುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ನಿಧನ ಸಂಭವಿಸಿದೆ.

ಮೃತರು ಪತ್ನಿ ಜಯಂತಿ, ಮಕ್ಕಳಾದ ಮಮತ, ರಮಿತ, ಸಂಗೀತ, ಸಮಿತ್‌ರಾಜ್, ಅಳಿಯಂದಿರಾದ ಮಹೇಶ್, ಗಿರೀಶ್, ಅವಿನಾಶ್ ಹಾಗೂ ಸಹೋದರ-ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page