ಗಲ್ಫ್ ಉದ್ಯಮಿ ಅಬ್ದುಲ್ ಗಫೂರ್ ಹಾಜಿ ಕೊಲೆ ಪ್ರಕರಣ: ಚಾರ್ಜ್ ಶೀಟ್‌ನಲ್ಲಿ 227 ಸಾಕ್ಷಿದಾರರು
ಕಾಸರಗೋಡು: ಪಳ್ಳಿಕ್ಕೆರೆ ಪೂಚಕ್ಕಾಡ್ ಫಾರೂಕ್ ಮಸೀದಿ ಬಳಿಯ ಬೈತುಲ್ ಮಂಜಿಲ್ನ ಗಲ್ಫ್ ಉದ್ಯಮಿ ಸಿ.ಎಂ. ಅಬ್ದುಲ್ ಗಫೂರ್ ಹಾಜಿ (55) ಕೊಲೆ ಪ್ರಕರಣದ ತನಿಖೆ ನಡೆಸಿ, ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ)ಕ್ಕೆ ಕಾಸರಗೋಡು ಡಿಸಿಆರ್ಬಿ ಡಿವೈಎಸ್ಪಿ ಕೆ.ಜೆ.ಜೋನ್ಸನ್ ಸಲ್ಲಿಸಿದ ಚಾರ್ಜ್ ಶೀಟ್ (ದೋಷಾರೋಪಪಟ್ಟಿ)ನಲ್ಲಿ ಒಟ್ಟು 227 ಸಾಕ್ಷಿದಾರರನ್ನು ಒಳಪಡಿಸಲಾಗಿದೆ.
ಮಾತ್ರವಲ್ಲ 63 ದಾಖಲುಪತ್ರಗಳು, 150 ವಸ್ತು ಪುರಾವೆಗಳು, ಎಂಟು ಮಂದಿ ಸದಸ್ಯರು ಒಳಗೊಂಡಿರುವ ಆರೋಪಿಗಳ ಪಾತುಕುಟ್ಟಿ ಎಂಬ ಹೆಸರಿನ ವಾಟ್ಸಪ್ ಗ್ರೂಪ್ನಲ್ಲಿ ಪರಸ್ಪರ ನಡೆಸಿದ ಶಬ್ದಸಂದೇಶಗಳು, ಅದನ್ನು ಖಾತರಿಪಡಿಸಲು ಆಕಾಶವಾಣಿ ಮೂಲಕ ನಡೆಸಲಾದ ಶಬ್ದಸಂದೇಶದ ಪರೀಕ್ಷಾ ವರದಿಯನ್ನು ಚಾರ್ಜ್ ಶೀಟ್ನಲ್ಲಿ ಒಳಪಡಿಸ ಲಾಗಿದೆ. ಇದರ ಹೊರತಾಗಿ ಎರಡು ಕಾರುಗಳು, ಮೂರು ಬೈಕ್ಗಳನ್ನು ಈ ಕೊಲೆಗೆ ಸಂಬAಧಿಸಿ ನ್ಯಾಯಾಲ ಯದಲ್ಲಿ ಪೊಲೀಸರು ಹಾಜರುಪಡಿ ಸಿದ್ದಾರೆ. ಮಾತ್ರವಲ್ಲ ಆರೋಪಿಗಳ ಆಸ್ತಿಗಳ ಕುರಿತಾದ ಮಾಹಿತಿಗಳನ್ನು ಚಾರ್ಜ್ ಶೀಟ್ನಲ್ಲಿ ಒಳಪಡಿಸಲಾಗಿದೆ.
ಈ ಪ್ರಕರಣದ ಮೊದಲ ಮೂರು ಆರೋಪಿಗಳಾದ ಮೂಲತಃ ಮಧೂರು ಉಳಿಯತ್ತಡ್ಕ ನೇಶನಲ್ ನಗರ ತುರ್ತಿ ನಿವಾಸಿಗಳು ಹಾಗೂ ಈಗ ಉದುಮ ಬಾರ ಮೀತ್ತಲ್ ಮಾಂuಟಿಜeಜಿiಟಿeಜಡ್ ಕಳಕುನ್ನಿನಲ್ಲಿ ವಾಸಿಸುತ್ತಿರುವ ಟಿ.ಎಂ. ಉಬೈಸ್ (ಉಮೈಸ್ 32), ಆತನ ಪತ್ನಿ ಮಂತ್ರವಾದಿನಿ ಶಮೀಮ ಕೆ.ಎಚ್ (35) ಮತ್ತು ಈಗ ಮುಕ್ಕೋಟ್ ಜಿಲಾನಿ ನಗರದಲ್ಲಿ ವಾಸಿಸುತ್ತಿರುವ ಮೂಲತಃ ಪೂಚಕ್ಕಾಡ್ ದೊಡ್ಡ ಮಸೀದಿ ಬಳಿಯ ಪಿ.ಎಂ. ಅನ್ಸಿಫಾ (36) ಅಬ್ದುಲ್ ಗಫೂರ್ ಹಾಜಿಯವರ ಕೊಲೆಯಲ್ಲಿ ನೇರವಾಗಿ ಶಾಮೀಲಾಗಿದ್ದಾರೆಂದು ಚಾರ್ಜ್ ಶೀಟ್ನಲ್ಲಿ ತಿಳಿಸಲಾಗಿದೆ.
ಮಾತ್ರವಲ್ಲ ಮಂತ್ರವಾದ ಹೆಸರಲ್ಲಿ ಆರೋಪಿಗಳು ಅಬ್ದುಲ್ ಗಫೂರ್ ಹಾಜಿಯವರಿಂದ ಪಡೆದ 596 ಪವನ್ ಚಿನ್ನದ ಪೈಕಿ 137 ಪವನ್ ಚಿನ್ನ್ನ ತನಿಖಾ ತಂಡ ವಿವಿಧ ಬ್ಯಾಂಕ್ ಗಳು ಮತ್ತು ಜ್ಯುವೆಲ್ಲರಿಗಳಿಂದ ಪತ್ತೆಹಚ್ಚಿದ್ದು, ಅದನ್ನು ಚಾರ್ಜ್ ಶೀಟ್ನ ಜೊತೆ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿದೆ. ಕೊಲೆ ನಡೆದ 86 ದಿನಗಳೊಳಗಾಗಿ ಚಾರ್ಜ್ ಶೀಟ್ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮಧೂರು ಕೊಲ್ಯದ ಆಯಿಷಾ (43) ಮತ್ತು ಪೂಚಕ್ಕಾಡ್ ಬಿಸ್ಮಿಲ್ಲಾ ರೋಡ್ ಅಲ್ ಬದರ್ ಮಂಜಿಲ್ ನಿವಾಸಿ, ಈ ಹಿಂದೆ ಗಲ್ಫ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪಿ.ಎಸ್. ಸೈಫುದ್ದೀನ್ ಬಾದ್ಶಾ (33) ಎಂಬವರನ್ನೂ ಈ ಪ್ರಕರಣಕ್ಕೆ ಸಂಬAಧಿಸಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಆಯಿಷಾಳಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಈ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳಿದ್ದಾರೆ. 2023 ಎಪ್ರಿಲ್ 14ರಂದು ಅಬ್ದುಲ್ ಗಫೂರ್ ಹಾಜಿಯವರನ್ನು ಅವರ ಮನೆಯೊಳಗೆ ಕೊಲೆಗೈಯ್ಯಲಾಗಿತ್ತು. ಮಂತ್ರವಾದಕ್ಕಾಗಿ ಅವರು ಆರೋಪಿಗಳಿಗೆ ನೀಡಿದ 596 ಪವನ್ನ ಚಿನ್ನದೊಡವೆಗಳನ್ನು ಹಿಂತಿರುಗಿ ಕೇಳಿದ್ದರು. ಆ ಬಳಿಕ ಅಬ್ದುಲ್ ಗಫೂರ್ ಹಾಜಿಯನ್ನು ಕೊಲೆಗೈಯ್ಯಲಾಗಿದೆ.