ಗಲ್ಫ್ ಉದ್ಯಮಿ ಕೊಲೆ ಪ್ರಕರಣ : ತನಿಖಾ ತಂಡ ಪತ್ತೆಹಚ್ಚಿದ್ದು 1.42 ಲಕ್ಷ ವಾಟ್ಸಪ್ ಸಂದೇಶಗಳು

ಕಾಸರಗೋಡು: 2023 ಎಪ್ರಿಲ್ 14ರಂದು ಗಲ್ಫ್ ಉದ್ಯಮಿ ಪಳ್ಳಿಕ್ಕೆರೆ ಪೂಚಕ್ಕಾಡ್ ಬೈತುಲ್ ಮಂಜಿಲ್ನ ಎಂ.ಸಿ. ಅಬ್ದುಲ್ ಗಫೂರ್ ಹಾಜಿ (55)ರನ್ನು ಅವರ ಮನೆಯಲ್ಲಿ ಕೊಲೆಗೈದ ಪ್ರಕರಣದ ನಾಲ್ವರು ಆರೋಪಿಗಳನ್ನು ಪ್ರಸ್ತುತ ಪ್ರಕರಣದ ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನದಿAದ ಐದು ದಿನಗಳ ತನಕ ಮತ್ತೆ ತಮ್ಮ ಕಸ್ಟಡಿಗೆ ಬಿಟ್ಟುಕೊಡುವಂತೆ ಪೊಲೀಸರು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ಪ್ರಥಮ)ಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನ್ಯಾಯಾಲಯ ಜ. 20ರಂದು ಪರಿಶೀಲಿಸಿದೆ.
ಈ ಪ್ರಕರಣದ ಆರೋಪಿಗಳಾದ ಉದುಮ ಬಾರಾ ಮೀತ್ತಲ್ ಮಾಂuಟಿಜeಜಿiಟಿeಜಡ್ ಕುಳಕುನ್ನಿನಲ್ಲಿ ವಾಸಿಸುತ್ತಿರುವ ಮೂಲತಃ ಮಧೂರು ಉಳಿಯತ್ತಡ್ಕ ನ್ಯಾಷನಲ್ ನಗರ ತುರ್ತಿ ನಿವಾಸಿ ಟಿ.ಎಂ. ಉಬೈಸ್ (ಉಮೈಸ್- 32) ಆತನ ಪತ್ನಿ ಮಂತ್ರವಾದಿನಿ ಶಮೀಮ ಕೆ.ಎಚ್ (34) ಪೂಚಕ್ಕಾಡಿನ ಅನ್ನಿಫ್ ಟಿ.ಎಂ. (36) ಮತ್ತು ಮಧೂರು ಕೊಲ್ಯ ನಿವಾಸಿ ಆಯಿಷ (43)ರನ್ನು ಹೆಚ್ಚಿನ ತನಿಖೆ ಗಾಗಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಐದು ದಿನಗಳ ತನಕ ನ್ಯಾಯಾಂಗಬAಧನದಿAದ ಈ ಹಿಂದೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿತ್ತು. ಆ ಐದು ದಿನಗಳ ಕಸ್ಟಡಿಯ ಅವಧಿ ನಿನ್ನೆ ಕೊನೆಗೊಂಡಿತ್ತು. ಅದರಂತೆ, ಅವರನ್ನು ಪೊಲೀಸರು ನಿನ್ನೆ ಪುನಃ ನ್ಯಾಯಾಲಯದಲ್ಲಿ ಹಾಜರುಪಡಿಸಿ ದ್ದರು. ಅದಾದ ಬೆನ್ನಲ್ಲೇ ಪೊಲೀಸರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮತ್ತೆ ಐದು ದಿನಗಳ ತನಕ ತಮ್ಮ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಕೋರಿ ನಿನ್ನೆ ಹೊಸದುರ್ಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಬಂಧಿತ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನೂ ನ್ಯಾಯಾ ಲಯ ಜ.20ರಂದು ಪರಿಶೀಲಿಸಲಿದೆ.
ಆರೋಪಿಗಳ ಮೊಬೈಲ್ ಫೋನ್ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಆರೋಪಿಗಳು ಅತ್ತಿತ್ತ ರವಾನಿಸಿದ 1.42 ಲಕ್ಷದಷ್ಟು ವಾಟ್ಸಪ್ ಸಂದೇಶಗಳು ಪತ್ತೆಯಾಗಿರುವುದಾಗಿ ತನಿಖಾ ತಂಡ ತಿಳಿಸಿದೆ. ಆರೋಪಿಗಳು ತಮ್ಮ ಮೊಬೈಲ್ ಫೋನ್ನಿಂದ ಹೊರತುಪಡಿಸಿರುವ ಸಂದೇಶಗಳ ಕುರಿತಾದ ಮಾಹಿತಿಗಳು ಸೈಬರ್ ಸೆಲ್ ಪೊಲೀಸರ ಸಹಾಯದಿಂದ ಲಭಿಸಿದ್ದಲ್ಲಿ, ಈ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಇತರ ವ್ಯಕ್ತಿಗಳ ಕುರಿತಾದ ಮಾಹಿತಿಗಳೂ ಲಭಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರಿಂದಾಗಿ ಅದರ ಜಾಡು ಹಿಡಿದು ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಕಳುಹಿಸಿದ ಕೆಲವು ಸಂದೇಶಗಳು ಮತ್ತು ವೀಡಿಯೋಗಳನ್ನು ಹಿಂತಿರುಗಿ ಲಭಿಸದ ರೀತಿಯಲ್ಲಿ ಅವರು ಅದನ್ನು ಡಿಲೀಟ್ ಮಾಡಿದ್ದಾರೆ. ಅದನ್ನು ಹಾಗೂ ಆರೋಪಿಗಳಿಗೆ ಸಹಾಯ ಒದಗಿಸಿದ ಇತರರ ಪತ್ತೆಗಾಗಿ ಸೈಬರ್ ಸೆಲ್ ಸಹಾಯದಿಂದ ಡಿಜಿಟಲ್ ರೂಪದ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page