ಗಿಳಿವಿಂಡುನಲ್ಲಿ ಗೋವಿಂದ ಪೈಗಳ 142ನೇ ಜನ್ಮ ದಿನಾಚರಣೆ- ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಪ್ರದಾನ

ಮಂಜೇಶ್ವರ: ಕನ್ನಡದ ಮೊದಲ ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈಗಳ ಗಿಳಿವಿಂಡು ಕೇರಳದಲ್ಲಿರುವುದ ರಿಂದ ಅದನ್ನು ಸಮರ್ಥವಾಗಿ ನಿರ್ವ ಹಿಸಬೇಕಾದ ಹೊಣೆ ಎಲ್ಲರಿಗಿಂತ ಹೆಚ್ಚು ಕೇರಳ ಸರ್ಕಾರಕ್ಕಿದೆ. ರಾಷ್ಟç ಕವಿಯ ಕನಸುಗಳನ್ನು ಸಾಕಾರ ಗೊಳಿಸಲು, ಸಾಹಿತ್ಯಿಕ ಮೌಲ್ಯಗಳನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಲು ಪರಂಪರೆಗೆ ಧಕ್ಕೆ ಬಾರದಂತೆ ಆಧುನಿಕ ಕೌಶಲ್ಯಗಳಿಂದೊಡಗೂಡಿ ಸ್ಮಾರಕ ನಿವೇಶನ ಇನ್ನಷ್ಟು ಪ್ರವರ್ಧಮಾನಕ್ಕೆ ತರಬೇಕು ಎಂದು ಹಿರಿಯ ಸಾಹಿತಿ, ಯಕ್ಷಗಾನ ಅರ್ಥದಾರಿ, ಡಾ.ರಮಾನಂದ ಬನಾರಿ ತಿಳಿಸಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಆಶ್ರಯ ದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗ ದಲ್ಲಿ ಮಂಜೇಶ್ವರ ಗಿಳಿವಿಂಡಲ್ಲಿ ನಿನೆ್ನ ನಡೆದ ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈ ಅವರ 142ನೇ ಜನ್ಮದಿನಾಚರಣೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕೊಡಮಾಡುವ ರಾಷ್ಟçಕವಿ ಮಂಜೇಶ್ವರ ಸ್ಮಾರಕ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನುವಾದಕ, ಸಾಹಿತಿ ಕೆ.ವಿ.ಕುಮಾರನ್ ಮಾಸ್ತರ್‌ರಿಗೆ ಪ್ರದಾನಗೈದು, ಸ್ಮಾರಕ ಸಮಿತಿ ಹೊಸತಾಗಿ ಪ್ರಕಟಿಸಿದ ಗೋವಿಂದ ಪೈಗಳ ಸಮಗ್ರ ಬದುಕು-ಸಾಧನೆಗಳ ಕುರಿತಾದ ‘ಸುರಭಿ’ ಕೃತಿಯನ್ನು ಬಿಡುಗಡೆಗೊಳಿಸಿದ ಶಾಸಕ ಸಿ.ಎಚ್.ಕುಂಞAಬು ಮಾತನಾಡಿ, ಗೋವಿಂದ ಪೈಗಳು ಮರಣಿಸಿದ ಬಳಿಕ ಅವರ ಕುಟುಂಬ ಸದಸ್ಯರು ಉದಾರವಾಗಿ ನೀಡಿರುವ ವಿಶಾಲ ನಿವೇಶನ ಹಂತಾನುಹAತವಾಗಿ ಇದೀಗ ಬೆಳೆದುಬರುತ್ತಿದೆ. ಆದರೆ, ಗಡಿ ಭಾಗದ ಈ ಸಾಹಿತ್ಯ ಕೇಂದ್ರದ ಬಗ್ಗೆ ಸಾಹಿತ್ಯ ಪ್ರೇಮಿಗಳಿಂದ ಬೆಂಬಲ ಲಭ್ಯವಾಗದಿರುವುದು ದುಃಖಕರ. ಇಲ್ಲಿಯ ನಿರ್ಮಿತಿಗಳು ಕೇವಲ ಕಟ್ಟಡವಾಗಿರದೆ ನಿರಂತರ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ವಾಗಬೇಕು.ಜನರು, ಸಮಾಜವನ್ನು ಸಕಾರಾತ್ಮಕತೆಯತ್ತ ಪ್ರಚೋದಿಸುವ ಪೈಗಳಂತಹ ಸಾಹಿತ್ಯ ಚೇತನಗಳು ಸಜ್ಜನ ಸಮಾಜದ ಸದಾ ಸ್ಮರಣೀಯರು ಎಂದವರು ತಿಳಿಸಿದರು.
ಮಂಜೇಶ್ವರ ಪಂ.ಅಧ್ಯಕ್ಷೆ ಜೀನ್ ಲವಿನೋ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ, ಕ.ಸಾ.ಪ.ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿದ್ದರು. ಪ್ರಶಸ್ತಿ ಪುರಸ್ಕೃತ ಕೆ.ವಿ.ಕುಮಾರನ್ ಮಾಸ್ತರ್ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಗಿಳಿವಿಂಡು ಪ್ರಧಾನ ಕಾರ್ಯದರ್ಶಿ ಎಂ.ಉಮೇಶ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಕೋಶಾಧಿಕಾರಿ ಬಾಲಕೃಷ್ಣ ಮಾಸ್ತರ್ ವಂದಿಸಿದರು. ವನಿತಾ ಆರ್.ಶೆಟ್ಟಿ ಹಾಗೂ ಆಶಾ ದಿಲೀಪ್ ಸುಳ್ಯಮೆ ನಿರೂಪಿಸಿದರು.
ವರ್ಷಾ ಮತ್ತು ಬಳಗ, ನಿಶ್ಮಿತ್ ಬಳಗದವರಿಂದ ಗೋವಿಂದ ಪೈ ಕೃತಿಗಳ ಗಾಯನ, ಹಾಗೂ ಸಭಾ ಕಾರ್ಯಕ್ರಮದ ಬಳಿಕ ವಿವಿಧ ತಂಡಗಳಿAದ ನೃತ್ಯ ಕಾರ್ಯಕ್ರಮ, ಕವಿಗೋಷ್ಠಿ ನಡೆಯಿತು.ಸುರಭಿ ಕೃತಿಯ ಬಗ್ಗೆ ಸಂಪಾದಕಿ ಆಶಾ ದಿಲೀಪ್ ಸುಳ್ಯಮೆ ಮಾತನಾಡಿದರು. ಜಯಂತಿ.ಕೆ, ಡಾ.ಯು.ಮಹೇಶ್ವರಿ, ಡಾ,ಸುಜೇಶ್ ಎಸ್., ಶಿವಶಂಕರ ಪಿ., ಶ್ರೀಲತ ಕೆ., ವನಿತಾ ಆರ್.ಶೆಟ್ಟಿ, ಉಮೇಶ್ ಎಂ.ಸಾಲ್ಯಾನ್‌ರನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page