ಗೂಡಿಗೆ ಬಿದ್ದ ಹೆಣ್ಣು ಚಿರತೆ: ಸಂಗಾತಿಯನ್ನು ಕಳೆದುಕೊಂಡ ಗಂಡು ಚಿರತೆಯಿಂದ ಭೀತಿ ಸೃಷ್ಟಿ
ಕಾಸರಗೋಡು: ಬೇಡಡ್ಕ, ಪುಲ್ಲೂರು ಪೆರಿಯ ಪಂಚಾಯತ್‌ಗಳಲ್ಲಿ ಇತ್ತೀಚೆಗೆ ಕಂಡು ಬಂದ ಚಿರತೆಯನ್ನು ಬಲೆಗೆ ಬೀಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಸ್ಥಾಪಿಸಿ ದರು. ಕೆಲವೇ ದಿನಗಳ ಹಿಂದೆ ೫ ವರ್ಷದ ಹೆಣ್ಣು ಚಿರತೆ ಸೆರೆಯಾದ ಕೊಳತ್ತೂರು, ನಿಡುವೋಟು, ಆಲವುಂಗಾಲ್‌ನಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಸ್ಥಾಪಿಸಿದ್ದಾರೆ. ಇಲ್ಲಿ ಸ್ಥಾಪಿಸಿರುವ ಕ್ಯಾಮರಾದಲ್ಲಿ ಸಾಮಾನ್ಯ ೮ ವರ್ಷ ಪ್ರಾಯದ ಗಂಡು ಚಿರತೆಯ ಸ್ಪಷ್ಟವಾದ ಚಿತ್ರಗಳು ದಾಖಲಾಗಿತ್ತು. ಇದರ ಆಧಾರದಲ್ಲಿ ಗೂಡು ಇಲ್ಲಿ ಸ್ಥಾಪಿಸಲಾಗಿದೆ.
ಈ ಸ್ಥಳದಲ್ಲಿ ಎರಡು ಚಿರತೆಗಳಿರುವುದಾಗಿ ಈ ಮೊದಲು ಶಂಕೆ ತಾಳಲಾಗಿತ್ತು. ಹೆಣ್ಣು ಚಿರತೆಯನ್ನು ಗೂಡು ಇರಿಸಿ ಸೆರೆ ಯಾಗಿಸಿರುವುದರೊಂದಿಗೆ ಸಂಗಾತಿಯನ್ನು ಅರಸಿಕೊಂಡು ಗಂಡು ಚಿರತೆ ಹಲವು ಭಾಗಗಳಲ್ಲಿ ರಾತ್ರಿ ಕಾಲಗಳಲ್ಲಿ ತಲುಪುತ್ತಿದೆ ಎಂದು ಅಧಿಕಾರಿಗಳು ತಿಳಿದಿದ್ದಾರೆ. ಜೊತೆಯಾಗಿದ್ದ ಹೆಣ್ಣು ಚಿರತೆಯನ್ನು ಕಾಣದ ಹಿನ್ನೆಲೆಯಲ್ಲಿ ಗಂಡು ಚಿರತೆ ಭೀತಿ ಸೃಷ್ಟಿಸಬಹುದೆಂಬ ಚರ್ಚೆಗಳು ಅಧಿಕಾರಿಗಳೆಡೆಯಲ್ಲಿ ನಡೆಯುತ್ತಿದೆ.