ಗೃಹಿಣಿಗೆ ಕಿರುಕುಳಕ್ಕೆ ಯತ್ನ: ಪತಿಯ ಸಹೋದರನ ವಿರುದ್ಧ ಕೇಸು
ಮುಳ್ಳೇರಿಯ: ಯುವತಿಗೆ ಕಿರುಕುಳ ನೀಡಲು ಯತ್ನಿಸಲಾಯಿ ತೆಂಬ ದೂರಿನಂತೆ ಪೊಲೀಸರು ಯುವತಿಯ ಪತಿಯ ಸಹೋದರನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ೪೦ರ ಹರೆಯದ ಯುವತಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಇದೇ ಯುವತಿಯ ದೂರಿನ ಪ್ರಕಾರ ಯುವಕನ ವಿರುದ್ಧ ಈ ಹಿಂದೆಯೂ ಆದೂರು ಪೊಲೀಸರು ಸಮಾನ ಕೇಸು ದಾಖಲಿಸಿಕೊಂಡಿದ್ದರು. ಈ ಕೇಸು ಜ್ಯಾರಿಯಲ್ಲಿರುವಂತೆಯೇ ಮತ್ತೆ ಕಿರುಕುಳಕ್ಕೆ ಯತ್ನ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.