ಗೃಹಿಣಿಗೆ  ಕಿರುಕುಳ ನೀಡಿದ ಯುವಕ ಸೆರೆ

ಮುಳ್ಳೇರಿಯ:  ಗೃಹಿಣಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಯುವಕ ಸೆರೆಗೀಡಾಗಿದ್ದಾನೆ.  ಅಡೂರು ಕೊರತ್ತಿಮೂಲೆ ನಿವಾಸಿಯಾದ ೩೭ರ ಹರೆಯದ ಯುವಕ ಸೆರೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ನಲ್ವತ್ತರ ಹರೆಯದ ಗೃಹಿಣಿ ಈ ಬಗ್ಗೆ  ದೂರು ನೀಡಿದ್ದಳು. ಯುವಕನ ವಿರುದ್ಧ ಇದೇ ಯುವತಿ ಈ ಹಿಂದೆಯೂ ಇದೇ ರೀತಿಯ ದೂರು ನೀಡಿದ್ದಳ. ಈ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅನಂತರವೂ ಯುವತಿಗೆ  ಆರೋಪಿ ಕಿರುಕುಳ ನೀಡಿರುವುದಾಗಿ  ಹೇಳಲಾಗುತ್ತಿದೆ. ಈ ಬಗ್ಗೆ ಕೇಸು ದಾಖಲಿಸುವುದರೊಂದಿಗೆ  ತಲೆಮರೆಸಿಕೊಂಡ ಆರೋಪಿ ಇತ್ತೀಚೆಗೆ ಮರಳಿ ಬಂದಿದ್ದು ಈ ಬಗ್ಗೆ ತಿಳಿದ ಆದೂರು ಪೊಲೀಸರು ಆರೋಪಿಂiiನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page