ಗೃಹಿಣಿಗೆ ಹಲ್ಲೆ ಗೈದು ಕಾರಿಗೆ ಹಾನಿಗೈದ ಪ್ರಕರಣ: ಆರೋಪಿ ಬಂಧನ
ಕುಂಬಳೆ: ವಿವಾಹ ವಿಚ್ಛೇಧನ ಬಗ್ಗೆ ದೂರು ನೀಡಿದ ದ್ವೇಷದಿಂದ ಮನೆಗೆ ಅತಿಕ್ರಮಿಸಿ ನುಗ್ಗಿ ಗೃಹಿಣಿಗೆ ಹಲ್ಲೆಗೈದು ಕಾರಿಗೆ ಹಾನಿಗೈದ ಬಗ್ಗೆ ನೀಡಿದ ದೂರಿನಂತೆ ಪತಿಯ ಸಂಬಂಧಿಕನಾದ ಯುವಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಆರಿಕ್ಕಾಡಿ ಕುನ್ನುವಿನ ನವಾಬ್ (35) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಆರೋಪಿಗೆ ನ್ಯಾಯಾ ಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಆರಿಕ್ಕಾಡಿ ಓಲ್ಡ್‌ರೋಡ್‌ನ 40ರ ಹರೆಯದ ಗೃಹಿಣಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಎಪ್ರಿಲ್ ೩ರಂದು ರಾತ್ರಿ ದೂರುದಾತೆಯ ಮನೆಗೆ ಅತಿಕ್ರಮಿಸಿ ನುಗ್ಗಿದ ಆರೋಪಿ ಆಕೆ ಮೇಲೆ ಹಲ್ಲೆ ನಡೆಸಿ ಅಸಭ್ಯವಾಗಿ ನಿಂದಿಸಿರುವುದಾಗಿ ದೂರಲಾಗಿದೆ. ಇದರ ಮುಂ ದುವರಿಕೆಯಾಗಿ ಆದಿತ್ಯವಾರ ರಾತ್ರಿ ದೂರುದಾತೆಯ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿಗೆ ಹಾನಿಗೊಳಿಸಿ, ಮಗನನ್ನು ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿರು ವುದಾಗಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ದೂರುದಾತೆಯ ಪತಿ ಗಲ್ಫ್‌ನಲ್ಲಿದ್ದಾರೆ. ಪತಿಯೊಂದಿಗೆ ಸಂಬಂಧ ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗೃಹಿಣಿ ವಿವಾಹ ವಿಚ್ಛೇದನಕ್ಕೆ ಕೇಸು ನೀಡಿರುವುದಾಗಿ ಹೇಳಲಾಗುತ್ತಿದೆ.