ಗೃಹಿಣಿ ಕುಸಿದು ಬಿದ್ದು ಮೃತ್ಯು
ಮುಳ್ಳೇರಿಯ: ಗೃಹಿಣಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ನೆಟ್ಟಣಿಗೆ ಬಳಿಯ ಬಜಪಟ್ರಮೂಲೆ ನಿವಾಸಿ ದಿ| ರಾಮಚಂದ್ರ ಹೆಗ್ಡೆಯವರ ಪತ್ನಿ ಪಾರ್ವತಿ (62) ಮೃತಪಟ್ಟವರಾಗಿದ್ದಾರೆ.
ನಿನ್ನೆ ಬೆಳಿಗ್ಗೆ ಇವರು ಮನೆ ಅಂಗಳದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕೊಂಡೊ ಯ್ಯಲು ಸಿದ್ಧತೆ ನಡೆಸುತ್ತಿದ್ದಂತೆ ಸಾವು ಸಂಭವಿಸಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ.
ಮೃತರು ಪುತ್ರ ಹರೀಶ್, ಸೊಸೆ ಹರಿಣಾಕ್ಷಿ, ಸಹೋ ದರರಾದ ನಾರಾಯಣ, ಕೃಷ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.