ಗೆಲುವು ಸಾಧ್ಯತೆಯುಳ್ಳವರಿಗೆ ಕೇರಳದಲ್ಲಿ ಸೀಟು-ಕೆ.ಸಿ. ವೇಣುಗೋಪಾಲ್
ದಿಲ್ಲಿ: ಲೋಕಸಭಾ ಚುನಾವಣೆ ಯಲ್ಲಿ ಕೇರಳದಲ್ಲಿ ಯಾರೆಲ್ಲ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನಿಸ ಲಿದೆಯೆಂದು ಸಂಸದ ಕೆ.ಸಿ. ವೇಣು ಗೋಪಾಲ್ ತಿಳಿಸಿದ್ದಾರೆ. ಗೆಲುವು ಸಾಧ್ಯತೆಯುಳ್ಳ ಅಭ್ಯರ್ಥಿ ಗಳಿಗೆ ಆದ್ಯತೆ ನೀಡಲಾಗುವುದು. ರಾಹುಲ್ ಗಾಂಧಿ ಸಿಟ್ಟಿಂಗ್ ಸೀಟ್ ಆಗಿರುವ ವಯನಾಡ್ನಲ್ಲಿ ಸ್ಪರ್ಧಿಸಬೇಕೇ ಎಂದು ಶೀಘ್ರ ನಿರ್ಧರಿಸಲಾಗುವುದೆಂದೂ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಇದೇ ವೇಳೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲಿರುವ ಆಮ್ ಆದ್ಮಿ ಪಾರ್ಟಿಯ ನಿರ್ಧಾರ ವನ್ನು ಮರು ಪರಿಶೀಲಿಸಬೇಕೆಂದೂ ಅವರು ಆಗ್ರಹಪಟ್ಟಿದ್ದಾರೆ. ಎಲ್ಲಾ ಸೀಟುಗಳಲ್ಲೂ ಎಎಪಿ ಸ್ಪರ್ಧಿಸಿದರೆ ಅದರಿಂದ ಬಿಜೆಪಿಗೆ ಪ್ರಯೋಜನ ವಾಗಲಿದೆಯೆಂದೂ ವೇಣುಗೋ ಪಾಲ್ ತಿಳಿಸಿದ್ದಾರೆ.