ಗೊಂಬೆ ವ್ಯಾಪಾರಿಯ ೬೫ ಸಾವಿರ ರೂಪಾಯಿ ಕಳವು

ಕುಂಬಳೆ: ಸಂತೆಯಲ್ಲಿ ಗೊಂಬೆ ವ್ಯಾಪಾರಿಯ ೬೫ ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಕುಂಬಳೆ ಪೇಟೆಯಲ್ಲಿ ಗೊಂಬೆಗಳ ಮಾರಾಟ ನಡೆಸುತ್ತಿದ್ದ ಕಾಞಂಗಾಡ್ ಬಲ್ಲಾ ಕಡಪ್ಪುರದ ಅನ್ವರ್ ಎಂಬವರ ಹಣ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಇಂದು ಮುಂಜಾನೆ ೧ ಗಂಟೆ ವೇಳೆ ಅಂಗಡಿಯೊಳಗೆ ಅನ್ವರ್ ನಿದ್ರಿಸಿದ್ದರೆನ್ನಲಾಗಿದೆ. ಬೆಳಿಗ್ಗೆ ೬ ಗಂಟೆಗೆ ಎದ್ದು ನೋಡಿದಾಗ ಹಣ, ಬಟ್ಟೆಬರೆ, ಮೊಬೈಲ್ ಇದ್ದ ಬ್ಯಾಗ್ ಕಳವಿಗೀಡಾದ ವಿಷಯ ತಿಳಿದುಬಂ ದಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತನಿಖೆಯ ಅಂಗವಾಗಿ ಪೇಟೆಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page