ಚಂದ್ರಯಾನ್ -೩ ಲ್ಯಾಂಡಿಂಗ್ ಸ್ಥಳಕ್ಕೆ ‘ಶಿವಶಕ್ತಿ’ ಹೆಸರಿಟ್ಟ ಪ್ರಧಾನಿ

ಬೆಂಗಳೂರು: ಚಂದ್ರಯಾನ್ ೩ ಚಂದ್ರನಲ್ಲಿ ಇಳಿದ ಸ್ಥಳವನ್ನು ಇನ್ನು ಮುಂದೆ ಶಿವಶಕ್ತಿ ಎಂದು ಕರೆಯಲಾಗುವುದೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದರು. ಇದೇ ವೇಳೆ ಆಗಸ್ಟ್ ೨೩ರನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಿಸಲಾಗುವುದೆಂದು ಅವರು ತಿಳಿಸಿದರು. ಇನ್ಯಾರಿಗೂ ತಲುಪಲು ಸಾಧ್ಯವಾಗದ ಸ್ಥಳಕ್ಕೆ ನಾವು ತಲುಪಿದ್ದು, ವಿಜ್ಞಾನಿಗಳ ತಿಳುವಳಿಕೆ ಹಾಗೂ ಸಮರ್ಪಣೆಯನ್ನು ದೇಶ ಸ್ಮರಿಸುತ್ತಿದೆ ಎಂದು ಪ್ರಧಾನಮಂತ್ರಿ ನುಡಿದರು. ದೇಶದ ಈ ಸಾಧನೆಯನ್ನು ಇತರರೂ ಅಂಗೀಕರಿಸಿದರೆಂದು ಪ್ರಧಾನಮಂತ್ರಿ ಈ ವೇಳೆ ನುಡಿದರು.

ಚಂದ್ರಯಾನ್ ೩ರ ಯಶಸ್ವಿಗೆ ಕಾರಣರಾದ ವಿಜ್ಞಾನಿಗಳನ್ನು ಬೆಂಗಳೂರಿಗೆ ತಲುಪಿ ಅಭಿನಂದಿಸಿ ಪ್ರಧಾನಮಂತ್ರಿ ಮಾತನಾಡುತ್ತಿದ್ದರು. ಚಂದ್ರಯಾನ್ ೩ ಚಂದ್ರನಲ್ಲಿ ಇಳಿಯುವ ವೇಳೆ ನಾನು ಗ್ರೀಸ್‌ನಲ್ಲಿದ್ದೆ. ಆದರೆ ನನ್ನ ಮನಸ್ಸು ನಿಮ್ಮೊಂದಿಗಿತ್ತು. ವಿಜ್ಞಾನದಲ್ಲಿ, ಭವಿಷ್ಯದಲ್ಲಿ ವಿಶ್ವಾಸವಿಡುವ ಎಲ್ಲಾ ಮನುಷ್ಯರು ಭಾರತದ ಈ ಸಾಧನೆಯಿಂದ ಸಂತೋ ಷಪಡುತ್ತಿದ್ದಾರೆಂದು ಅವರು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *

You cannot copy content of this page